Monday, 25 Jan, 8.14 am News First Live

ಟಾಪ್ನ್ಯೂಸ್
ಆರ್ಥಿಕತೆ ಚೇತರಿಕೆಗೆ 'ಪಾರ್ಕ್'​​ ಗಿರವಿ ಇಡಲು ಮುಂದಾದ ಪಾಕ್ ಪ್ರಧಾನಿ

ಸಂಕಷ್ಟದಲ್ಲಿರೋ ದೇಶದ ಆರ್ಥಿಕತೆ ಚೇತರಿಕೆಗಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಇಸ್ಲಾಮಾಬಾದ್​ನ ಅತೀದೊಡ್ಡ ಉದ್ಯಾನವನವನ್ನು ಗಿರವಿ ಇಡಲು ಮುಂದಾಗಿದ್ದಾರೆ.

500 ಶತಕೋಟಿ ರೂಪಾಯಿ ಸಾಲ ಪಡೆಯಲು ಎಫ್​​-9 ಉದ್ಯಾನವನವನ್ನು ಅಡಮಾನ ಇಡೋ ಪ್ರಸ್ತಾಪವನ್ನು, ಫೆಡರಲ್ ಕ್ಯಾಬಿನೆಟ್​ನ ಮುಂದಿನ ಸಭೆಯ ಕಾರ್ಯಸೂಚಿಯಲ್ಲಿ ಸೇರಿಸಲು ನಿರ್ಧರಿಸಲಾಗಿದೆ. ನಾಳೆ ಈ ಸಭೆ ನಡೆಯಲಿದ್ದು, ಇಮ್ರಾನ್ ಖಾನ್ ತಮ್ಮ ನಿವಾಸದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಗೆ ಹಾಜರಾಗಲಿದ್ದಾರೆ.

ಫಾತಿಮಾ ಜಿನ್ನಾ ಪಾರ್ಕ್​ ಎಂದು ಕರೆಯಲಾಗೋ ಎಫ್​​-9 ಉದ್ಯಾನವನ 759 ಎಕರೆ ವಿಸ್ತೀರ್ಣವಿದ್ದು, ಇದು ಪಾಕಿಸ್ತಾನದ ಅತೀ ದೊಡ್ಡ ಹಸಿರು ಪ್ರದೇಶಗಳಲ್ಲಿ ಒಂದಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top