Thursday, 03 Dec, 9.55 am News First Live

ಕ್ರಿಕೆಟ್
ಆಸಿಸ್​ ನೆಲದಲ್ಲಿ​ ಪಾಂಡ್ಯ ಹವಾ.. ಟೀಮ್​​ ಇಂಡಿಯಾ ಪರ ಏಕಾಂಗಿ ಹೋರಾಟ

ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳೆಲ್ಲ ಆಸಿಸ್​​ ನೆಲದಲ್ಲಿ ಒಂದೊಂದು ರನ್​ಗೂ ಒದ್ದಾಡುತ್ತಿದ್ದಾರೆ. ಆದರೆ ಆ ಒಬ್ಬ ಬ್ಯಾಟ್ಸ್​ಮನ್​​ ಮಾತ್ರ ಆಸ್ಟ್ರೇಲಿಯಾ ಬೌಲರ್ಸ್​ಗಳಿಗೆ ಎದೆಯೊಡ್ಡಿ ನಿಂತಿದ್ದಾರೆ. ಬ್ಯಾಟಿಂಗ್​, ಬೌಲಿಂಗ್​​ ಎರಡರಲ್ಲೂ ಪಳಗಿದಾತ. ಟೀಮ್​ ಇಂಡಿಯಾದ ಆಲ್​ರೌಂಡರ್​​ ವಿಭಾಗವೇ ಹೆಮ್ಮೆ ಪಡುವಂತಹ ಎನರ್ಜಿ ಅವರದ್ದು. ಕಷ್ಟದ ಸಮಯದಲ್ಲೂ ಟೀಮ್​ ಇಂಡಿಯಾದ ಕೈ ಹಿಡಿಯುತ್ತಾರೆ. ಆಕ್ಸಿಜನ್​​ ತರ ಸದಾ ಟೀಂ ಇಂಡಿಯಾದ ಜತೆಗಿರುತ್ತಾರೆ. ಈಗ ಆಸಿಸ್​​ ನೆಲದಲ್ಲೂಅಬ್ಬರಿಸಿದ್ದಾರೆ. ಏಕದಿನ ಸರಣಿಯಲ್ಲಿ ಟೀಮ್​​ ಇಂಡಿಯಾದ ಮಾನ ಕಾಪಾಡಿದ್ದಾರೆ.

ಹೌದು ಅವರು ಬೇರ್ಯಾರು ಅಲ್ಲ, ಟೀಂ ಇಂಡಿಯಾದ ಆಲ್​ರೌಂಡರ್​​ ವಿಭಾಗದ ಟ್ರಂಪ್​​ ಕಾರ್ಡ್​​ ಹಾರ್ದಿಕ್​​ ಪಾಂಡ್ಯ. ದಿಗ್ಗಜ ಬ್ಯಾಟ್ಸ್​​ಮನ್​​ ಅನಿಸಿಕೊಂಡವ್ರು, ಆಸಿಸ್​​ ನೆಲದಲ್ಲಿ ಪೆವಿಲಿಯನ್​ ಪರೇಡ್​ ನಡೆಸಿದ್ರು. ಇತ್ತ ತರಗೆಲೆಯಂತೆ ವಿಕೆಟ್​​ ಬೀಳುತ್ತಿದ್ದರೆ ಅತ್ತ ಹಾರ್ದಿಕ್​​ ಪಾಂಡ್ಯ ಮಾತ್ರ ಏಕಾಂಗಿ ಹೋರಾಟ ನಡೆಸಿದ್ರು. ಟೀಮ್​​ ಇಂಡಿಯಾದ ನೆರವಿಗೆ ನಿಂತ್ರು.

ಸಿಡ್ನಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ​ ಪಾಂಡ್ಯ 76 ಎಸೆತದಲ್ಲಿ 90 ರನ್​​ ಸಿಡಿಸಿ ಘರ್ಜಿಸಿದ್ರು. ಟಾಪ್​​ ಆರ್ಡರ್​​ ಬ್ಯಾಟಿಂಗ್​​ ವಿಭಾಗ ವೈಫಲ್ಯದ ನಡುವೆಯೂ ಹಾರ್ದಿಕ್​​ ಬಿರುಸಿನ ಬ್ಯಾಟಿಂಗ್​ನಿಂದ ​ ಗಮನ ಸೆಳೆದ್ರು. ಪಾಂಡ್ಯ ಬ್ಯಾಟಿಂಗ್​​ ವೈಭವ ಮೊದಲ ಪಂದ್ಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ ಅನ್ನೋದು ನಿಜ. ಆದ್ರೆ 2ನೇ ಪಂದ್ಯದಲ್ಲಿ ಅವರು ಬೇಗ ಔಟಾದ್ರು. ಇದರ ಹೊರತಾಗಿಯೂ ಉತ್ತಮ ಬೌಲಿಂಗ್​​ ನಡೆಸಿ ಗಮನ ಸೆಳೆದ್ರು. ಸಿಡ್ನಿಯಲ್ಲೇ ನಡೆದ 2ನೇ ಏಕದಿನ ಪಂದ್ಯದಲ್ಲಿ ಹಾರ್ದಿಕ್​​ 31 ಎಸೆತದಲ್ಲಿ 28 ರನ್​​ ಸಿಡಿಸಲಷ್ಟೇ ಶಕ್ತರಾದ್ರು. ಆದರೆ ಬೌಲಿಂಗ್​ನಲ್ಲಿ ​ಹಾರ್ದಿಕ್​​ ಡೇಂಜರಸ್​​ ಸ್ಟೀವ್​​ ಸ್ಮಿತ್​​ ವಿಕೆಟ್​ ಅನ್ನ ಉರುಳಿಸಿ ಆಸಿಸ್​​ ರನ್​ ವೇಗಕ್ಕೆ ಕಡಿವಾಣ ಹಾಕಿದ್ರು.

ಮೊದಲೆರಡು ಪಂದ್ಯದಲ್ಲಿ ಅಬ್ಬರಿಸಿದ್ದ ಹಾರ್ದಿಕ್​​ 3ನೇ ಏಕದಿನ ಪಂದ್ಯದಲ್ಲೂ ಘರ್ಜಿಸಿದ್ರು. ದಿಗ್ಗಜ ಬ್ಯಾಟ್ಸ್​ಮನ್​ಗಳು ಹಠಾತ್​​ ಕೈಕೊಟ್ಟಾಗ ರನ್​ ಒಟ್ಟುಗೂಡಿಸಲು ಟೊಂಕ ಕಟ್ಟಿ ನಿಂತ್ರು. ಮೂರನೇ ಏಕದಿನ ಪಂದ್ಯದಲ್ಲಿ ಪಾಂಡ್ಯ 76 ಎಸೆತದಲ್ಲಿ ಅಜೇಯ 92 ರನ್​​ ಚಚ್ಚಿದರು. ಜಡೇಜಾ ಜತೆಗೂಡಿ 6ನೇ ವಿಕೆಟ್​ಗೆ ಅಜೇಯ 150 ರನ್​​ ಜತೆಯಾಟವಾಡಿ ತಂಡದ ಒಟ್ಟು ಮೊತ್ತವನ್ನು 300ರ ಗಡಿ ದಾಟಿಸಿದ್ರು.

ಮರಳು ಗಾಡಿನಲ್ಲಿ ಓಯಾಸಿಸ್​ ಇದ್ದ ಹಂಗೆ ಟೀಂ ಇಂಡಿಯಾಕ್ಕೆ ಸಂಕಷ್ಟದಲ್ಲಿ ಆಲ್​ರೌಂಡರ್​​ ಹಾದಿರ್ಕ್​ ಪಾಂಡ್ಯ ನೆರವಾದ್ರು. ಈ ಮೂಲಕ ಆಸಿಸ್​​ ನೆಲದಲ್ಲಿ ದಿಗ್ಗಜ ಬ್ಯಾಟ್ಸ್​ಮನ್​ಗಳಿಂದ ಆಗದ ಸಾಧನೆಯನ್ನ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದು ತೋರಿಸಿಕೊಟ್ರು. ಟಿ20ನಲ್ಲೂ ಹಾರ್ದಿಕ್​​ ಇದೇ ಪ್ರದರ್ಶನ ನೀಡಲಿ. ಭಾರತ ತಂಡಕ್ಕೆ ನೆರವಾಗಲಿ ಅನ್ನೋದು ಅಭಿಮಾನಿಗಳ ಆಶಯವಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top