Sunday, 24 Jan, 6.54 am News First Live

ಕ್ರಿಕೆಟ್
ಐಪಿಎಲ್​​ನಲ್ಲಿ ಎಬಿಡಿಗೆ ಮತ್ತೊಂದು ಹೆಗ್ಗಳಿಕೆ; ಸಂಪಾದಿಸಿದ ಹಣವೆಷ್ಟು ಗೊತ್ತಾ?

ಸೌಥ್ ಆಫ್ರಿಕನ್ ಬ್ಯಾಟ್ಸ್​​ಮ್ಯಾನ್, ಮಿಸ್ಟರ್ 360 ಡಿಗ್ರಿ ಎಬಿ ಡಿವಿಲಿಯರ್ಸ್ ಐಪಿಎಲ್​​ನಲ್ಲಿ ಹೊಸ ದಾಖಲೆಯನ್ನ ಕ್ರಿಯೇಟ್ ಮಾಡಿದ್ದಾರೆ. ಇತ್ತೀಚೆಗೆ 2021ರ ಐಪಿಎಲ್​ ಸರಣಿಗೆ ಸ್ಫೋಟಕ ಬ್ಯಾಟ್ಸ್​ಮನ್​ ಎಬಿಡಿಯನ್ನ ಆರ್​​ಸಿಬಿ ಉಳಿಸಿಕೊಂಡಿದೆ. ಈ ಮೂಲಕ ಐಪಿಎಲ್​​ನಲ್ಲಿ 100 ಕೋಟಿಗೂ ಹೆಚ್ಚು ಹಣ ಪಡೆದ ಮೊದಲ ವಿದೇಶಿ ಕ್ರಿಕೆಟರ್​​ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವರದಿಗಳ ಪ್ರಕಾರ ಈಗಾಗಲೇ ಭಾರತದ ನಾಲ್ವರು ಆಟಗಾರರು 100 ಕೋಟಿಗೂ ಅಧಿಕ ಹಣ ಗಳಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ, ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಚೆನ್ನೈ ತಂಡದ ಸುರೇಶ್ ರೈನಾ 100ಕೋಟಿಗೂ ಹೆಚ್ಚು ಹಣವನ್ನ ಸಂಪಾದನೆ ಮಾಡಿದ್ದಾರೆ, ಮಾಡುತ್ತಿದ್ದಾರೆ ಎನ್ನಲಾಗಿದೆ.

ಎಬಿಡಿಗೆ ಆರ್​ಸಿಬಿ ತಂಡ ಒಂದು ಸೀಜನ್​ನಲ್ಲಿ 11 ಕೋಟಿಯನ್ನ ಪಾವತಿಸುತ್ತದೆ. ಈ ಮೂಲಕ ಇವರು 102.5 ಕೋಟಿ ಗಳಿಸಿದ್ದಾರೆ ಅಂತಾ ವರದಿಯಾಗಿದೆ. ಐಪಿಎಲ್​ನಲ್ಲಿ 169 ಮ್ಯಾಚ್​ಗಳನ್ನ ಆಡಿರುವ ಎಬಿಡಿ 4849 ರನ್​ಗಳಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top