ಬೆಂಗಳೂರು: ರಾಜ್ಯ ರಾಜಧಾನಿ ಸೇರಿ ಎಲ್ಲೆಡೆ ಕೊರೊನಾ ಸೋಂಕು ಮಿತಿ ಮೀರುತ್ತಿದೆ. ಎಷ್ಟೋ ರೋಗಿಗಳು ಚಿಕಿತ್ಸೆ ಕೂಡ ಸಿಗದೇ ಸಾವನ್ನಪ್ಪುತ್ತಿದ್ದಾರೆ. ಕೇವಲ ಸೋಂಕಿತರಷ್ಟೇ ಅಲ್ಲ, ಸೋಂಕು ಇಲ್ಲದೇ ಇರುವ ಇತರೆ ರೋಗಿಗಳು ಕೂಡ ಪಡಬಾರದ ಪಾಡು ಪಡ್ತಾ ಇದ್ದಾರೆ. ಜನರಲ್ಲಿ ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ತಜ್ಞರ ಟಾಸ್ಕ್ ಪೋರ್ಸ್ ಸದಸ್ಯರೂ ಆಗಿರುವ ಡಾ. ಗಿರಿಧರ್ ಬಾಬು ಅವರನ್ನು ನ್ಯೂಸ್ ಫಸ್ಟ್ ಮಾತನಾಡಿಸಿದೆ. ಫೋನ್ ಮೂಲವೇ ಅವರು ಸಂದರ್ಶನ ನೀಡಿದ್ದು, ಹಲವು ಮಹತ್ವದ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಡಾ. ಗಿರಿಧರ್ ಬಾಬು ಸಂದರ್ಶನದ ಯಥಾವತ್ ರೂಪ ಇಲ್ಲಿದೆ:
- ನ್ಯೂಸ್ ಫಸ್ಟ್: ಕೊರೊನಾ ಟೆಸ್ಟ್ ಆಗದೇ ಖಾಸಗಿ ಆಸ್ಪತ್ರೆಗಳು ಸೇರಿಸಿಕೊಳ್ಳುತ್ತಿಲ್ಲ.. ಇದಕ್ಕೆ ಉತ್ತರವಾಗಿ ಆಯಂಟಿಜೆನ್ ಟೆಸ್ಟ್ ವರ್ಕ್ ಆಗುತ್ತಾ.?
ಡಾ.ಗಿರಿಧರ್ ಬಾಬು: ಹೌದು, ಈ ಟೆಸ್ಟ್ ಮಾಡುವುದರಿಂದ ತುಂಬಾ ಬೇಗ ರಿಸಲ್ಟ್ ಸಿಗುತ್ತೆ. ಹೆಚ್ಚು ಅಂದ್ರೆ 2 ಗಂಟೆ ಒಳಗೆ ರಿಸಲ್ಟ್ ಬರುತ್ತೆ. ಇದರಿಂದ ರಿಪೋರ್ಟ್ಗೆ ಕಾಯುವ ಅವಶ್ಯಕತೆ ಇರುವುದಿಲ್ಲ. ಪಾಸಿಟಿವ್ ಬಂದ್ರೆ ತಕ್ಷಣ ಅವರ ಐಸೋಲೇಷನ್ ಮಾಡಬಹುದು. ಏಕಾಏಕಿ ಕೇಸ್ ಸಂಖ್ಯೆ ಜಾಸ್ತಿ ಆದ ಕಾರಣ ಹೀಗೆ ತಡವಾಗಿದೆ. ಈಗಾಗಲೇ ಹೇಳಿದಂತೆ ಇನ್ಮುಂದೆ ರಿಯಲ್ ಟೈಂ ರಿಪೋರ್ಟ್ ನೀಡಲು ವ್ಯವಸ್ಥೆಯಾಗ್ತಿದೆ. - ನ್ಯೂಸ್ ಫಸ್ಟ್ : ಱಪಿಡ್ ಆಯಂಟಿಜನ್ ಟೆಸ್ಟ್ ರಿಪೋರ್ಟ್ ನೆಗಿಟಿವ್ ಬಂದರೆ ಏನು ಮಾಡ್ತೀರಾ?
- ಡಾ.ಗಿರಿಧರ್ ಬಾಬು: ಡಾ.ಗಿರಿಧರ್ ಬಾಬು: ಆಯಂಟಿಜೆನ್ ಟೆಸ್ಟ್ನಲ್ಲಿ ಪಾಸಿಟಿವ್ ಬಂದ್ರೆ ಯಾವುದೇ ಬೇರೆ ಟೆಸ್ಟ್ ಆಗತ್ಯವಿಲ್ಲ. ಅವರರಿಗೆ ಟ್ರೀಟ್ಮೆಂಟ್ ನೀಡೋಕೆ ಶುರು ಮಾಡಬಹುದು. ಆದರೆ ಕೆಲವೊಬ್ಬರಿಗೆ ರೋಗ ಲಕ್ಷಣಗಳಿದ್ದು, ನೆಗೆಟಿವ್ ಬಂದಿರುತ್ತೆ. ಆಗ ನಾವು ಆರ್ಟಿಜಿಸಿಆರ್ ಟೆಸ್ಟ್ ಮಾಡಬೇಕಾಗುತ್ತೆ.
- ನ್ಯೂಸ್ ಫಸ್ಟ್: ಆರ್ಟಿಜಿಸಿಆರ್ ಟೆಸ್ಟ್ ಹೇಗೆ ಮಾಡ್ತಾರೆ.? ಮತ್ತೆ ಇದರ ರಿಪೋರ್ಟ್ ಎಷ್ಟು ದಿನಕ್ಕೆ ಬರುತ್ತೆ.?
ಡಾ.ಗಿರಿಧರ್ ಬಾಬು: ಇದು ಸ್ವಾಬ್ ಟೆಸ್ಟ್, ಇದರ ರಿಪೋರ್ಟ್ ಸಹ ಈಗ ಬೇಗ ಬರುವುದಕ್ಕೆ ವ್ಯವಸ್ಥೆ ಆಗಿದೆ. ಇದನ್ನ ಲ್ಯಾಬ್ ನಲ್ಲಿ ಮಾಡುವುದರಿಂದ ಅಗತ್ಯ ಸಿಬ್ಬಂದಿಯನ್ನ ಈಗ ನಿಯೋಜನೆ ಮಾಡಲಾಗಿದೆ. - ನ್ಯೂಸ್ ಫಸ್ಟ್: ಸದ್ಯ ಸ್ವಾಬ್ ಕೊಟ್ಟವರ ರಿಸಲ್ಟ್ ಬರೋದು ಸಾಕಷ್ಟು ತಡವಾಗ್ತಿದೆ. ಈ ವೇಳೆ ಅವರು ಹೊರಗೆಲ್ಲ ತಿರುಗಾಡೋ ಆರೋಪ ಕೂಡ ಕೇಳಿ ಬಂದಿದೆ. ಇದರಿಂದಾಗಿ ಸಮಸ್ಯೆ ಜಾಸ್ತಿ ಆಗಿದೆಯಾ.?
ಡಾ.ಗಿರಿಧರ್ ಬಾಬು: ಖಂಡಿತಾ.. ಸ್ವಾಬ್ ಪಡೆಯುವ ವೇಳೆ ಅವರಿಗೆ ರಿಸಲ್ಟ್ ಬರುವ ತನಕ ಐಸೋಲೇಟ್ ಆಗಲು ಹೇಳಿರ್ತಾರೆ. ಇದನ್ನ ಅವರು ಅರ್ಥ ಮಾಡಿಕೊಳ್ಳಬೇಕು.. ನಿಮ್ಮ ವಾಹಿನಿ ಮೂಲಕ ಜನ್ರಲ್ಲಿ ಇದನ್ನೇ ಕೇಳಿಕೊಳ್ತೀನಿ. ನಿಮ್ಮ ಟೆಸ್ಟ್ ರಿಸಲ್ಟ್ ಬರೋ ತನಕವಾದ್ರೂ ಮನೆಯಲ್ಲೇ ಇರಿ. ನಿಮ್ಮಿಂದ ಬೇರೆಯವರಿಗೆ ಚೈನ್ ಲಿಂಕ್ ಆಗುವುದು ತಪ್ಪುತ್ತೆ. - ನ್ಯೂಸ್ ಫಸ್ಟ್: ಸುಮಾರು 2.5 ರಿಂದ 3 ಲಕ್ಷ ಜನಕ್ಕೆ ಈಗಾಗಲೇ ಪಾಸಿಟಿವ್ ಆಗಿದೆ ಅಂತ ಕೆಲ ತಜ್ಞರು ಹೇಳ್ತಾರೆ. ಇದು ನಿಜಾನಾ?
ಡಾ.ಗಿರಿಧರ್ ಬಾಬು: ಇವೆಲ್ಲ ಇಂದು ಪಾಸಿಟಿವ್ ಆಗಿದೆ ಅಂತಾ ಅಲ್ಲ.. ಇನ್ಫೆಕ್ಷನ್ ಟು ರೆಷ್ಯೂ ಅಂತಾ ಇರುತ್ತೆ.. ಐಸಿಎಂಆರ್ ಡೆಟಾ ಪ್ರಕಾರ 100 ಜನಕ್ಕೆ ಬಂದ್ರೆ ನಮ್ಮ ದೇಶದಲ್ಲಿ ಒಬ್ಬಿಬ್ಬರನ್ನು ನಾವು ಗುರ್ತಿಸುತ್ತಿದ್ದೇವೆ. ಅಂದ್ರೆ ಇದು ಸಾಕಷ್ಟು ಜನರಿಗೆ ಬಂದು ಹೋಗಿರುತ್ತೆ. ಕೆಲವರಿಗೆ ಲಕ್ಷಣಾನೂ ಇರಲ್ಲ, ಬಂದಿದ್ದೂ ಗೊತ್ತಾಗಿರಲ್ಲ್ಲ. ಹೀಗೆ ಒಂದು ಊಹೆ ಪ್ರಕಾರ ಆ ರೀತಿ ಲೆಕ್ಕ ಕೊಟ್ಟಿರಬಹುದಷ್ಟೇ. - ನ್ಯೂಸ್ ಫಸ್ಟ್: ಬಂದು ಹೋಗಿರುತ್ತೆ ನಿಜ. ಆದ್ರೆ, ಹಾಗೆ ಬಂದು ಹೋಗಿರೋರಿಂದ ಸೋಂಕು ಹರಡಲ್ವಾ?
- ಡಾ.ಗಿರಿಧರ್ ಬಾಬು: ಇಲ್ಲ.. ಹಾಗಾಗಲ್ಲ. ಬಂದು ಹೋಗಿರುವವರಿಂದ ಸೋಂಕು ಹರಡಲ್ಲ. ಆದ್ರೆ, ರೋಗದ ಯಾವುದೇ ಲಕ್ಷಣ ಇರದೇ ಇರೋ ಸೋಂಕಿತರಿರ್ತಾರಲ್ಲ.. ಅವರಿಂದ ಸ್ಪ್ರೆಡ್ ಆಗುವ ಸಾಧ್ಯತೆ ಇರುತ್ತೆ.
- ನ್ಯೂಸ್ ಫಸ್ಟ್: ಕಳೆದ ಒಂದು ವಾರದಿಂದ ಸಾವಿನ ಸಂಖ್ಯೆ ಜಾಸ್ತಿ ಆಗ್ತಾನೇ ಇದೆ.. ಇದಕ್ಕೇನು ಕಾರಣ?
ಡಾ.ಗಿರಿಧರ್ ಬಾಬು:ಡಾ.ಗಿರಿಧರ್ ಬಾಬು: ನೋಡಿ, ಕೇಸ್ ಸಂಖ್ಯೆ ಜಾಸ್ತಿ ಅದಂತೆ. ಅದಕ್ಕೆ ತಕ್ಕನಾಗಿ ರಿಸಲ್ಟ್ ಸಹ ಇರುತ್ತೆ. ಇದಕ್ಕೆ ನಾವು ರಿವರ್ಸ್ ಕ್ವಾರಂಟೀನ್ ಮಾಡಬೇಕು. ಯಾಕಂದ್ರೆ ವಯಸ್ಸಾಗಿರೋರು ಜಾಸ್ತಿ ಸಾವನಪ್ಪುತ್ತಿದ್ದಾರೆ. ಅವರ ರಕ್ಷಣೆಯನ್ನು ಹೆಚ್ಚು ಮಾಡಬೇಕು. ಅವರನ್ನ ಅದಷ್ಟು ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅವರನ್ನ ಆಚೆ ಬಿಡಬಾರದು. - ನ್ಯೂಸ್ ಫಸ್ಟ್: ಇನ್ನೂಂದು ಮಹತ್ವದ ಸಂಗತಿಯೆಂದರೆ ಪಾಸಿಟಿವ್ ಬಂದ್ರೆ ಹೇಳ್ತಾರೆ.. ಆದ್ರೆ ನೆಗೆಟಿವ್ ಬಂದಾಗ ಮಾಹಿತಿಯನ್ನೇ ನೀಡಲ್ಲ. ಇದ್ರಿಂದಾಗಿ ಆತಂಕದಲ್ಲೇ ಕಾಲ ಕಳೆಯುವ ಪರಿಸ್ಥಿತಿ ಜನರಿಗೆ ಬಂದಿದೆಯಲ್ವಾ?
ಡಾ.ಗಿರಿಧರ್ ಬಾಬು: ಈ ಬಗ್ಗೆ ರಾಜ್ಯಸರ್ಕಾರ ಐಸಿಎಂಆರ್ ಪರ್ಮಿಷನ್ ಪಡೆದು, ಒಂದು ಆಯಪ್ ಮಾಡಬೇಕು. ಯಾರಿಗೆ ನೆಗೆಟಿವ್ ಬಂದಿದೆಯೋ ಅವರಿಗೂ ಸಂದೇಶ ರವಾನೆ ಮಾಡಬೇಕು ಅಂತ ನಮ್ಮ ತಜ್ಞರ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಸದ್ಯಕ್ಕೆ ನಿರ್ಧಾರ ಸರ್ಕಾರದ ಮೇಲೆ ಅವಲಂಬಿತವಾಗಿದೆ. - ನ್ಯೂಸ್ ಫಸ್ಟ್: ಇಂದು ಹಲವರು ಮಾನಸಿಕ ಒತ್ತಡದಿಂದ ಇರುವಂತೆ ಆಗದೆಯಲ್ವಾ?
ಡಾ.ಗಿರಿಧರ್ ಬಾಬು: ಕೊರೊನಾ ಅನ್ನೋ ಆಘಾತಕ್ಕೆ ಒಳಗಾಗಿ ಯೋಚನೆ ಮಾಡುವುದು ಸಮಸ್ಯೆ ಆಗುತ್ತೆ. ಕೆಲವರು ಖಿನ್ನತೆಗೆ ಒಳಗಾಗುತ್ತಾರೆ. ಮತ್ತೆ ಕೆಲವರು ಒಂದೇ ಕಡೆ ಇದ್ದೇವೆ ಅಂತಾ ಡಿಪ್ರೆಷನ್ಗೆ ಒಳಗಾಗುತ್ತಾರೆ. ಅದರಿಂದ ಹೊರ ಬರಲು ಆತ್ಮಬಲ ಅನ್ನೋದು ಬಹಳ ಮುಖ್ಯವಾಗಿದೆ.
ಹೀಗೆ ಹಲವು ಮಾಹಿತಿಯನ್ನು ಡಾ.