ಟಾಪ್ನ್ಯೂಸ್
ಭಾರತ ಭೇಟಿಯ ಸವಿನೆನಪನ್ನ ಮೆಲುಕು ಹಾಕಿದ ಇವಾಂಕ ಟ್ರಂಪ್

ವೈಟ್ ಹೌಸ್ನಿಂದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೇನು ಕೆಲವೇ ದಿನಗಳಲ್ಲಿ ನಿರ್ಗಮಿಸಲಿದ್ದಾರೆ. ಆ ಬಳಿಕ ಅಮೆರಿಕದಲ್ಲಿ ಹೊಸ ದರ್ಬಾರ್ ಶುರುವಾಗಲಿದೆ. ಆರಂಭದಲ್ಲಿ ಸೋಲನ್ನ ಒಪ್ಪಿಕೊಳ್ಳದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಖುರ್ಚಿಯನ್ನ ಜೋ ಬೈಡನ್ ಅವರಿಗೆ ಬಿಡಲು ಒಪ್ಪಿಕೊಂಡಿದ್ದಾರೆ. 4 ವರ್ಷಗಳ ಕಾಲ ಅಧ್ಯಕ್ಷ ಸ್ಥಾನವನ್ನ ಅಲಂಕರಿಸಿ, ದೇಶದ ಒಳಿತಿಗಾಗಿ, ಮಿತ್ರ ರಾಷ್ಟ್ರಗಳ ಸ್ನೇಹ ಪ್ರೀತಿಗಾಗಿ ಸವೆಸಿದ ಹಾದಿಗಳು ಅದೆಷ್ಟೋ. ವೈಟ್ಹೌಸ್ ಅನ್ನೋ ಮಾಯಾವಿಯಲ್ಲಿ ಕೂತು ತೆಗೆದುಕೊಂಡ ದೃಢ ನಿರ್ಧಾರಗಳು ಟ್ರಂಪ್ ಹಾಗೂ ಅವರ ಕುಟುಂಬಕ್ಕೆ ಶಾಶ್ವತವಾಗಿ ನೆನಪಿನಲ್ಲಿರುತ್ತವೆ.
ಇದೀಗ ಆ ನೆನಪುಗಳು ಟ್ರಂಪ್ ಅವರ ಪುತ್ರಿ ಇವಾಂಕರನ್ನ ಕಾಡಿದೆ. ಅದೇ ಕಾರಣಕ್ಕೆ ಭಾರತದೊಂದಿಗಿನ ಭೇಟಿಯನ್ನ ಇವಾಂಕ ಟ್ರಂಪ್ ತಮ್ಮ ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ರಿಕಾಲ್ ಮಾಡಿಕೊಂಡಿದ್ದಾರೆ. ಅವಿಸ್ಮರಣೀಯ ಭಾರತದ ಪ್ರವಾಸವನ್ನ ನೆನಪಿಸಿಕೊಂಡಿರುವ ಇವಾಂಕ ಟ್ರಂಪ್, ಪ್ರಧಾನಿ ಮೋದಿ ಜೊತೆಗಿನ ಕೆಲವು ಫೋಟೋಗಳನ್ನ ಶೇರ್ ಮಾಡಿದ್ದಾರೆ. ತಮ್ಮ ನೆನಪಿನ ಬುತ್ತಿಯಲ್ಲಿ ಭಾರತ ಹಾಗೂ ಅಮೆರಿಕಾ ನಡುವಿನ ಸ್ನೇಹ ಸಂಬಂಧದ ಬಗ್ಗೆ ಬರೆದುಕೊಂಡಿದ್ದಾರೆ.
ಮೂರು ವರ್ಷಗಳ ಹಿಂದೆ ಭಾರತದಲ್ಲಿ ನಡೆದ ಜಾಗತಿಕ ಉದ್ಯಮಶೀಲತೆ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಜೊತೆಗಿನ ನೆನಪುಗಳು. ಜಗತ್ತು ಕೊರೊನಾ ಸೋಂಕಿನ ವಿರುದ್ಧ ಹೋರಾಟ ಮಾಡುತ್ತಲೇ ಇದೆ. ಹೀಗಾಗಿ ಜಾಗತಿಕ ಭದ್ರತೆ, ಸ್ಥಿರತೆ ಮತ್ತು ಆರ್ಥಿಕ ಸಮೃದ್ಧಿಯನ್ನು ಉತ್ತೇಜಿಸುವಲ್ಲಿ ನಮ್ಮ ಬಲವಾದ ಸ್ನೇಹ ಎಂದಿಗಿಂತಲೂ ಮುಖ್ಯವಾಗಿದೆ ಅಂತಾ ಇವಾಂಕ ಬರೆದುಕೊಂಡಿದ್ದಾರೆ.
ಅಂದ್ಹಾಗೆ 2017ರಲ್ಲಿ ಹೈದ್ರಾಬಾದ್ನಲ್ಲಿ ಜಿಇಎಸ್ ಶೃಂಗಸಭೆ ನಡೆದಿತ್ತು. ಇವಾಂಕ ಟ್ರಂಪ್, ಅಮೆರಿಕಾ ನಿಯೋಗದ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ 160 ದೇಶಗಳ 1600 ಗಣ್ಯರು ಭಾರತಕ್ಕೆ ಬಂದಿದ್ದರು.
Fond memories from the Global Entrepreneurship Summit in India with Prime Minister @narendramodi!
As the world continues to battle COVID-19, our countries&dhapos; strong friendship in promoting global security, stability, and economic prosperity is more important than ever. pic.twitter.com/t16pEpFB2g
— Ivanka Trump (@IvankaTrump) November 30, 2020