Wednesday, 16 Sep, 9.22 pm News First Live

ಟಾಪ್ನ್ಯೂಸ್
ಭಾರತಕ್ಕೆ 10 ಕೋಟಿ ಡೋಸ್​ ಕೊರೊನಾ ಲಸಿಕೆ ನೀಡಲು ರಷ್ಯಾ ನಿರ್ಧಾರ

ಭಾರತದ ಡಾ. ರೆಡ್ಡೀಸ್​ ಲ್ಯಾಬರೋಟರಿಗೆ 10 ಕೋಟಿ ಡೋಸ್​​ ಸ್ಪುಟ್ನಿಕ್​-ವಿ ಕೊರೊನಾ ಲಸಿಕೆಯನ್ನು ಮಾರಾಟ ಮಾಡುವುದಾಗಿ ರಷ್ಯಾ ಮೂಲದ ಸಾವರಿನ್​ ವೆಲ್ತ್​ ಫಂಡ್​ ತಿಳಿಸಿದೆ.

ಸ್ಪುಟ್ನಿಕ್​​-ವಿ ಲಸಿಕೆಯ ಪ್ರಯೋಗ ಭಾರತದಲ್ಲಿ ಇನ್ನಷ್ಟೇ ನಡೆಯಬೇಕಿದೆ. ಒಂದು ವೇಳೆ ಲಸಿಕೆ ಪ್ರಯೋಗ ಯಶಸ್ವಿಯಾದರೆ. ಡಾ. ರೆಡ್ಡಿಸ್​ ಲ್ಯಾಬ್ರೋಟರಿಗೆ 10 ಕೋಟಿ ಡೋಸ್​ಗಳನ್ನು ಮಾರಾಟ ಮಾಡುವುದಾಗಿ ಸಾವರಿನ್​ ವೆಲ್ತ್​ ಫಂಡ್ ಮಾಹಿತಿ ನೀಡಿದೆ. ಸ್ಪುಟ್ನಿಕ್​-ವಿ ಕೊರೊನಾ ಸೋಂಕಿಗೆ ವಿಶ್ವದಲ್ಲಿ ಸಿದ್ಧವಾದ ಮೊದಲ ಲಸಿಕೆ ಅಂತ ರಷ್ಯಾ ಹೇಳಿಕೊಂಡಿದೆ. ಸದ್ಯ ಸ್ಪುಟ್ನಿಕ್​-ವಿ ಲಸಿಕೆಯ ಮೂರನೇ ಹಂತದ ಪ್ರಯೋಗ ರಷ್ಯಾದಲ್ಲಿ ಚಾಲ್ತಿಯಲ್ಲಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top