Saturday, 01 Aug, 8.21 pm News First Live

ಟಾಪ್ನ್ಯೂಸ್
'ಭಜರಂಗಿ-2' ಬಿಡುಗಡೆಗೂ ಮುನ್ನ ಸರ್ಪ್ರೈಸ್ ಕೊಟ್ರು ಶಿವಣ್ಣ -ಹರ್ಷ

ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಹಾಗೂ ನಿರ್ದೇಶಕ ಎ.ಹರ್ಷ ಕಾಂಬಿನೇಷನ್ ಅಂದ್ರೆ ದೊಡ್ಮನೆ‌ ಅಭಿಮಾನಿಗಳಿಗೆ ನಿರೀಕ್ಷೆ ಒಂದು ಹಿಡಿ ಹೆಚ್ಚೇ ಇದೆ. ಯಾಕಂದ್ರೆ ಹರ್ಷ ಹಾಗೂ ಶಿವಣ್ಣ ಜೋಡಿ ಮಾಡಿದ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆದ್ದಿವೆ.
'ಭಜರಂಗಿ', 'ವಜ್ರಕಾಯ' ಸಿನಿಮಾಗಳು ಸಿನಿ‌ ಪ್ರೇಕ್ಷಕರ ಮನ ಗೆದ್ದಿವೆ. ಹೀಗಾಗಿ ಸೆಂಚುರಿ ಸ್ಟಾರ್ ನಿರ್ದೇಶಕ ಎ. ಹರ್ಷಗೆ ಮೂರನೇ ಬಾರಿ ನಿರ್ದೇಶನ ಮಾಡೋಕೆ ಹೇಳಿದ್ರು. ಇದರ ಫಲವಾಗಿ 'ಭಜರಂಗಿ 2' ಸಿನಿಮಾ ಆಗ್ಲೇ ರೆಡಿಯಾಗಿದೆ. 'ಭಜರಂಗಿ 2'ನ ಒಂದೇ ಒಂದು ಟೀಸರ್ ಇಡೀ ಸೌತ್ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲೇ ಸೌಂಡ್ ಮಾಡುತ್ತಿದ್ದು, ಶಿವಣ್ಣ, ಹರ್ಷರ ಕಾಂಬಿನೇಷನ್​ನ ಮೂರನೇ ಸಿನಿಮಾಕ್ಕೆ ಬೇರೆ ಭಾಷೆಗಳಿಂದಲೂ ಬೇಡಿಕೆ ಬಂದಿದೆ. ಇದೆಲ್ಲದರ ಜೊತೆಗೆ ಸೆಂಚುರಿ ಸ್ಟಾರ್ ಹಾಗೂ ಹರ್ಷ ಜೋಡಿ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.

'ಬ್ಲ್ಯಾಕ್​ ಅಂಡ್​ ವೈಟ್'​ ಪೋಸ್ಟರ್​ ಹಿಂದಿನ ಕಥೆ.!
ಡಾ. ಶಿವರಾಜ್ ಕುಮಾರ್ ಹಾಗೂ ಎ.ಹರ್ಷ ಕಾಂಬಿನೇಷನ್​ನ ಮೂರನೇ ಸಿನಿಮಾ 'ಭಜರಂಗಿ 2' ಕೊನೆಯ ಹತ್ತು ದಿನದ ಶೂಟಿಂಗ್​ನ ಹಂತದಲ್ಲಿದೆ. ಕೊರೊನಾ ಇಲ್ಲದಿದ್ದಿದ್ರೆ ಇಷ್ಟೊತ್ತಿಗಾಗಲೇ ಸಿನಿಮಾ ಬಿಡುಗಡೆ ಆಗಬೇಕಿತ್ತು. ಈಗ ಹರ್ಷ ಶಿವಣ್ಣನಿಗಾಗಿ ಮತ್ತೊಂದು ಯುನಿಕ್ ಆಗಿರೋ ಸ್ಟೋರಿ ರೆಡಿ ಮಾಡಿ ಕಥೆ ಹೇಳಿದ್ದಾರೆ. ಸ್ಟೋರಿ ಕೇಳಿದ ಸೆಂಚುರಿ ಸ್ಟಾರ್, ಈ ಸಿನಿಮಾ ನಿರ್ಮಾಣ ಮಾಡೋಕೆ ಪ್ಯಾಷನೆಟ್ ಪ್ರೊಡ್ಯೂಸರ್ ಬೇಕು ಅಂತ ಹೇಳಿದ್ರಂತೆ. ಕೊನೆಗೆ ಈ ಸಿನಿಮಾ ನಿರ್ಮಾಣ ಮಾಡೋಕೆ ನಿರ್ಮಾಪಕರನ್ನ ಶಿವಣ್ಣನೇ ಹುಡುಕಿ ಕೊಟ್ಟಿದ್ದಾರಂತೆ. ಚಿತ್ರರಂಗಕ್ಕೆ ನಿರ್ಮಾಪಕರಾಗಿ ಬಂದ್ರೆ ಶಿವರಾಜ್​ಕುಮಾರ್ ಸಿನಿನಾದಿಂದಲೇ ಬರಬೇಕು ಅಂದುಕೊಂಡಿದ್ದ ಅಶೋಕ್‌ ಕುಮಾರ್ ಮತ್ತು ರಮೇಶ್‌ ಕುಮಾರ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

'ಕಿಲ್ಲಿಂಗ್ ವೀರಪ್ಪನ್' ನಿರ್ಮಾಣ ಮಾಡಿದ್ದ ಸುಧೀಂದ್ರ ಕೂಡ ಕೈಜೋಡಿಸಿದ್ದಾರೆ. ಶಿವಣ್ಣನ ಹುಟ್ಟುಹಬ್ಬದಂದು ಒಂದಷ್ಟು ಹೊಸ ಸಿನಿಮಾಗಳು ಅನೌನ್ಸ್ ಆಗಿದ್ವು. ಅದರಲ್ಲಿ ಯಾವುದೇ ಮಾಹಿತಿ ಇಲ್ಲದ ಒಂದು 'ಬ್ಲ್ಯಾಕ್‌ ಆಯಂಡ್ ವೈಟ್‌' ಪೋಸ್ಟರ್‌ ಸಹ ರಿಲೀಸ್ ಆಗಿತ್ತು. ಅದು ಯಾವ ಸಿನಿಮಾ? ನಿರ್ದೇಶಕರು ಯಾರು ಎಂಬ ಮಾಹಿತಿಗಳೇನು ಇರಲಿಲ್ಲ. ಅಫ್ರೋಡೈಟ್ ರಿನೈಸಾನ್ಸ್‌ ಟಾಕೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಇದರ ನಿರ್ಮಾಣದ ಹೊಣೆ ಹೊತ್ತುಕೊಂಡಿದೆ ಅಂತ ಹೇಳಲಾಗಿತ್ತು. ಇದೀಗ ಈ ಸಿನಿಮಾನ ನಿರ್ದೇಶನ ಮಾಡ್ತಿರೋದು ಎ.ಹರ್ಷ ಎಂದು ತಿಳಿದುಬಂದಿದೆ. ಶಿವಣ್ಣನ ಜೊತೆ ತಮ್ಮ ಮುಂದಿನ ಸಿನಿಮಾ ಹೇಗಿರುತ್ತೆ ಅಂತ ಆ 'ಬ್ಲಾಕ್ ಅಂಡ್ ವೈಟ್' ಫೋಟೋದಿಂದಲೇ ಹೇಳೋ ಪ್ರಯತ್ನ ಹರ್ಷ ಮಾಡಿದ್ರು. ಅದೇನೇ ಇರ್ಲಿ, 'ಭಜರಂಗಿ', 'ವಜ್ರಕಾಯ', 'ಭಜರಂಗಿ 2' ಬಳಿಕ ಶಿವರಾಜ್​ಕುಮಾರ್ ಹಾಗೂ ಹರ್ಷ ಮತ್ತೆ ಜೋಡಿಯಾಗ್ತಿರೋದು ಎಲ್ಲರಲ್ಲೂ ಸಂತಸ ಮೂಡಿಸಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top