Wednesday, 02 Dec, 10.11 pm News First Live

ದೇಶ
ಎರಡು ಪ್ರಮುಖ ಕ್ಷಿಪಣಿಗಳನ್ನ ಪರೀಕ್ಷಾರ್ಥವಾಗಿ ಉಡಾಯಿಸಿದ ಭಾರತೀಯ ಸೇನೆ

ಆಂಧ್ರಪ್ರದೇಶ: ಭಾರತೀಯ ವಾಯು ಸೇನೆ ಮತ್ತೆ ಮತ್ತೆ ಕ್ಷಿಪಣಿಗಳನ್ನು ಪರೀಕ್ಷಿಸುವ ಮೂಲಕ ಶತ್ರು ದೇಶಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದೆ. ಅದರ ಮುಂದುವರಿದ ಭಾಗವಾಗಿ ನಿನ್ನೆ ಎರಡು ಪ್ರಮುಖ ಮಿಸೈಲ್​ಗಳ ಪರೀಕ್ಷೆಗಳನ್ನ ಯಶಸ್ವಿಯಾಗಿ ನಡೆಸಲಾಗಿದೆ.

ಆಕಾಶ್ ಮತ್ತು ರಷ್ಯನ್ ಇಗ್ಲ ಏರ್​ ಡಿಫೆನ್ಸ್ ಮಿಸೈಲ್​ಗಳನ್ನು ನಿನ್ನೆ ಪರೀಕ್ಷಾರ್ಥವಾಗಿ ಉಡಾಯಿಸಲಾಗಿದೆ. ಆಂಧ್ರಪ್ರದೇಶದ ಸೂರ್ಯಲಂಕ ಬಳಿಯ ಭಾರತೀಯ ವಾಯುಸೇನೆಯ ಸ್ಟೇಷನ್ ಬಳಿ ನಿನ್ನೆ ಮಿಸೈಲ್​ಗಳ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಭಾರತೀಯ ವಾಯುಸೇನೆಯ ಏರ್ ಮಾರ್ಷಲ್​ ಉಪ ಮುಖ್ಯಸ್ಥ ಹೆಚ್​.ಎಸ್.ಅರೋರಾ ಭಾಗಿಯಾಗಿದ್ದರು.

ಕಳೆದ ಕೆಲವು ತಿಂಗಳುಗಳಿಂದ ಭಾರತೀಯ ವಾಯುಸೇನೆ ಬ್ರಹ್ಮೋಸ್ ಸೇರಿದಂತೆ ಹತ್ತಾರು ಕ್ಷಿಪಣಿಗಳನ್ನು ಯಶಸ್ವಿಯಾಗಿ ಉಡಾಯಿಸುವ ಮೂಲಕ ಹೆಗ್ಗಳಿಕೆ ಗಳಿಸಿದೆ. ಇಲ್ಲಿ ಪರೀಕ್ಷೆಗೊಳಗಾದ ಹಲವು ಕ್ಷಿಪಣಿಗಳು ಡಿಆರ್​​ಡಿಓದಲ್ಲಿ ತಯಾರಾಗಿವೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top