Thursday, 29 Oct, 9.11 pm News First Live

ದೇಶ
ಫ್ರಾನ್ಸ್ ಭಯೋತ್ಪಾದಕ ದಾಳಿ ಖಂಡಿಸಿದ ಪ್ರಧಾನಿ; ಫ್ರಾನ್ಸ್ ಜೊತೆ ದೇಶವಿದೆ ಎಂದ ಮೋದಿ

ನವದೆಹಲಿ: ಇಂದು ಫ್ರಾನ್ಸ್​ ನೈಸ್​ ಬಳಿ ಚರ್ಚ್​ವೊಂದರಲ್ಲಿ ಶಂಕಿತ ಉಗ್ರ ಚಾಕುವಿನಿಂದ ನಡೆಸಿದ ದಾಳಿಯಲ್ಲಿ ಓರ್ವ ಚರ್ಚ್​ನ ವಾರ್ಡನ್, ಮಹಿಳೆ ಸೇರಿ ಒಟ್ಟು ಮೂವರು ಸಾವನ್ನಪ್ಪಿದ್ದಾರೆ.

ಈ ಚರ್ಚ್​ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ನರೇಂದ್ರ ಮೋದಿ ಭಯೋತ್ಪಾದಕತೆಯ ವಿರುದ್ಧ ಹೋರಾಡಲು ಭಾರತ ಫ್ರಾನ್ಸ್​ನ ಜೊತೆಗೆ ನಿಲ್ಲುತ್ತದೆ ಎಂದಿದ್ದಾರೆ.

ತಮ್ಮ ಟ್ವೀಟ್​ನಲ್ಲಿ.. ಫ್ರಾನ್ಸ್​ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿ ಮತ್ತು ಇಂದು ನಡೆದ ಘೋರ ದಾಳಿಯನ್ನು ನಾನು ಖಂಡಿಸುತ್ತೇನೆ. ದಾಳಿಯಲ್ಲಿ ಸಾವನ್ನಪ್ಪಿದವರ ಕುಟುಂಬ ಮತ್ತು ಫ್ರಾನ್ಸ್​ ಜನತೆಗೆ ನಮ್ಮ ಸಂತಾಪಗಳು. ಭಯೋತ್ಪಾದಕತೆಯ ವಿರುದ್ಧ ಹೋರಾಡಲು ಭಾರತ ಫ್ರಾನ್ಸ್​ನ ಜೊತೆಗೆ ನಿಲ್ಲುತ್ತದೆ ಎಂದು ಹೇಳಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top