Wednesday, 25 Nov, 2.11 pm News First Live

ದೇಶ
ಗೋಲ್ಡ್ ಸ್ಮಗ್ಲಿಂಗ್: ಕೇರಳ ಸಿಎಂ ಮಾಜಿ ಕಾರ್ಯದರ್ಶಿ 5 ದಿನ ಕಸ್ಟಮ್ಸ್ ವಶಕ್ಕೆ

ಕೊಚ್ಚಿ: ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಿನ್ನೆ ಕಸ್ಟಮ್ಸ್ ಅಧಿಕಾರಿಗಳು ಕೇರಳ ಸಿಎಂ ಮಾಜಿ ಕಾರ್ಯದರ್ಶಿ ಎಮ್​. ಶಿವಶಂಕರ್​ ಅವರನ್ನು ಬಂಧಿಸಿದ್ದರು. ಇಂದು ಅವರನ್ನು ಅಡಿಷನಲ್ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು.

ವಿಚಾರಣೆ ನಡೆಸಿದ ಕೋರ್ಟ್ ಎಮ್​ ಶಿವಶಂಕರ್ ಅವರನ್ನು 5 ದಿನಗಳ ಕಾಲ ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕೆಲವು ತಿಂಗಳ ಹಿಂದೆ ಬರೋಬ್ಬರಿ 30 ಕೆ ಜಿ ಚಿನ್ನದ ಕಳ್ಳಸಾಗಣೆ ಪ್ರಕರಣವನ್ನು ಕಸ್ಟಮ್ಸ್ ಅಧಿಕಾರಿಗಳು ಬಯಲಿಗೆಳೆದಿದ್ದರು. ಕೇರಳ ಸರ್ಕಾರಕ್ಕೂ ಚಿನ್ನ ಕಳ್ಳಸಾಗಣೆಗೂ ಸಂಬಂಧವಿದೆ ಎಂದು ಬಿಜೆಪಿ ಆರೋಪಿಸಿತ್ತು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top