Tuesday, 24 Nov, 12.14 pm News First Live

ಟಾಪ್ನ್ಯೂಸ್
ಗೋಲ್ಡ್​​ ಸ್ಮಗ್ಲಿಂಗ್ ಕೇಸ್; ಕೇರಳ ಸಿಎಂ ಮಾಜಿ ಕಾರ್ಯದರ್ಶಿ ಎಮ್. ಶಿವಶಂಕರ್ ಅರೆಸ್ಟ್

ತಿರುವನಂತಪುರಂ: ಕೇರಳ ಚಿನ್ನ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ರಾಜಕೀಯ ಕಾರ್ಯದರ್ಶಿ ಎಮ್​. ಶಿವಶಂಕರ್ ಅವರನ್ನ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಎಮ್. ಶಿವಶಂಕರ್ ಅವರು ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ. ಹಾಗೂ ಜಾರಿ ನಿರ್ದೇಶನಾಲಯದ ಪ್ರಕರಣದಡಿ ನವೆಂಬರ್ 26 ರವರೆಗೂ ಜೈಲಿನಲ್ಲಿ ಇರಲಿದ್ದಾರೆ ಎನ್ನಲಾಗಿದೆ.

ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕೆಲವು ತಿಂಗಳ ಹಿಂದೆ 30 ಕೆ.ಜಿ. ಚಿನ್ನದ ಕಳ್ಳಸಾಗಣೆ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಕೇರಳ ಸರ್ಕಾರಕ್ಕೂ ಚಿನ್ನ ಕಳ್ಳಸಾಗಣೆಗೂ ಸಂಬಂಧವಿದೆ ಎಂದು ಬಿಜೆಪಿ ಸರ್ಕಾರ ಆರೋಪಿಸಿತ್ತು. ಈ ಆರೋಪವನ್ನು ಪಿಣರಾಯಿ ವಿಜಯನ್ ತಳ್ಳಿಹಾಕಿದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top