Wednesday, 02 Dec, 9.11 pm News First Live

ರಾಜ್ಯ
ಇಂದು 1,05,918 ಕೊರೊನಾ ಟೆಸ್ಟ್.. 1,440 ಪಾಸಿಟಿವ್ ಕೇಸ್

ಬೆಂಗಳೂರು: ರಾಜ್ಯದಲ್ಲಿ ಇಂದು 19484 ಱಪಿಡ್ ಆಯಂಟಿಜೆನ್ ಟೆಸ್ಟ್ ಹಾಗೂ 86434 ಆರ್​ಟಿಪಿಸಿಆರ್ ಟೆಸ್ಟ್​ಗಳೂ ಸೇರಿದಂತೆ ಒಟ್ಟು 1,05,918 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಇಂದು 1,440 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈವರೆಗೆ ರಾಜ್ಯದಲ್ಲಿ ಸೋಂಕಿಗೆ ಒಳಗಾದವರ ಸಂಖ್ಯೆ 887667 ಕ್ಕೆ ಏರಿಕೆಯಾಗಿದೆ.

ಇಂದು 983 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೆ ಸಂಖ್ಯೆ 8,51,690 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆದಂತಾಗಿದೆ. ಇಂದು ಸೋಂಕಿನಿಂದಾಗಿ 19 ಮಂದಿ ಸಾವನ್ನಪ್ಪಿದ್ದು ಅನ್ಯಕಾರಣಗಳಿಂದ ಸಾವನ್ನಪ್ಪಿದ 19 ಮಂದಿ ಸೇರಿ ಈವರೆಗೆ ಒಟ್ಟು 11,808 ಸೋಂಕಿತರನ್ನ ಕೊರೊನಾ ಬಲಿಪಡೆದಿದೆ.

ರಾಜ್ಯದಲ್ಲಿ ಸದ್ಯ 24,150 ಆಯಕ್ಟಿವ್ ಕೇಸ್​ಗಳಿವೆ.. ಈ ಪೈಕಿ 318 ಮಂದಿ ಸೋಂಕಿತರು ಐಸಿಯುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತನ್ನ ಬುಲೆಟಿನ್​ನಲ್ಲಿ ತಿಳಿಸಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top