Sunday, 27 Sep, 10.53 am News First Live

ಯಾದಗಿರಿ
ಕೆರೆ ಕಟ್ಟೆ ಒಡೆದು, ನೀರಲ್ಲಿ ಸಿಲುಕಿದ್ದ ಹತ್ತು ಕುಟುಂಬಗಳು ಸ್ಥಳಾಂತರ

ಯಾದಗಿರಿ: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಜನರು ತತ್ತರಿಸಿದ್ದಾರೆ. ಸುರಪುರ ತಾಲೂಕಿನ ಮಾವಿನ ಮಟ್ಟಿ ಗ್ರಾಮದ ಕೆರೆ ಕಟ್ಟೆ ಒಡೆದ ಹಿನ್ನೆಲೆ, ನೀರಲ್ಲಿ ಸಿಲುಕಿದ್ದ ಹತ್ತು ಕುಟುಂಬಗಳನ್ನ ತಹಶಿಲ್ದಾರ ನಿಂಗಪ್ಪ ಬಿರಾದಾರ್ ನೇತೃತ್ವದಲ್ಲಿ ಸ್ಥಳಾಂತರ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಊರಿನ ಅಂಗನವಾಡಿ ಕೇಂದ್ರಕ್ಕೆ ಮೂವತ್ತು ಜನರನ್ನ ಸ್ಥಳಾಂತರಿಸಲಾಗಿದೆ.

ಮಳೆ ತಗ್ಗಿದ ಹಿನ್ನೆಲೆ ಜಲಾವೃತವಾದ ಹಳ್ಳಿಗಳಲ್ಲಿ ನೀರಿನ ಪ್ರಮಾಣ ಇಳಿಮುಖವಾಗ್ತಿದೆ. ನಾರಾಯಣ ಪುರ ಡ್ಯಾಮ್ ನಿಂದ 2 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ಜನರಿಗೆ ನದಿ ಬಳಿ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.

ಜಿಲ್ಲೆಯ ವಡಗೇರಾ ತಾಲೂಕಿನ ಬಿಳ್ಹಾರ್ ಗ್ರಾಮದ ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮಸ್ಥರು ಮೋಟರ್ ಎಂಜಿನ್ ಬಳಸಿ ನೀರು ಹೊರಹಾಕುತ್ತಿದ್ದಾರೆ. ಕಳೆದೆರಡು ದಿನಗಳಿಂದ ಗ್ರಾಮಸ್ಥರು ನೀರು ನಿಂತ ಜಾಗದಲ್ಲೇ ಇದ್ದು, ಇಂದು ಮಳೆ ಕೊಂಚ ಬಿಡುವು ನೀಡಿದ ಹಿನ್ನೆಲೆ ನೀರು ಹೊರಹಾಕಲು ಪರದಾಡುತ್ತಿದ್ದಾರೆ.

ಒಳ ಚರಂಡಿ ವ್ಯವಸ್ಥೆಗಳಿಲ್ಲದೇ ಪ್ರತಿ ಬಾರಿ ಮಳೆ ಬಂದಾಗಲೂ ಗ್ರಾಮದಲ್ಲಿ ನೀರು ಸುತ್ತುವರಿಯುತ್ತದೆ. ಈ ಬಗ್ಗೆ ಗಮನ ಹರಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top