ದೇಶ
ಕೊರೊನಾ ಆರ್ಭಟ ಹೆಚ್ಚಳ: ಕೇಂದ್ರದಿಂದ ಹೊಸ ಮಾರ್ಗಸೂಚಿ

ನವದೆಹಲಿ: ದೇಶದಲ್ಲಿ ಕೊರೊನಾರ್ಭಟ ಹೆಚ್ಚಾಗಿದೆ. ಕೆಲ ರಾಜ್ಯಗಳಲ್ಲಿ ಕೊರೊನಾ ಎರಡನೇ ಅಲೆ ಸಹ ಶುರುವಾಗಿದೆ. ಈ ನಿಟ್ಟಿನಲ್ಲಿ ಮಹಾಮಾರಿ ಕಟ್ಟಿಹಾಕಲು ಕೇಂದ್ರ ಗೃಹ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿಯಲ್ಲಿ ಪ್ರಯಾಣಿಕರಿಗೆ ಅಂತರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ಅವಕಾಶ ಕೊಡಲಾಗಿದೆ.
ಸಿನಿಮಾ ಥಿಯೇಟರ್ಗಳಿಗೆ ಈಗಿರುವ ಕ್ರಮಗಳನ್ನೇ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಅಥ್ಲೀಟ್ಗಳ ತರಬೇತಿಗಷ್ಟೇ ಸ್ವಿಮಿಂಗ್ ಪೂಲ್ಗಳನ್ನ ಬಳಸಲು ತಿಳಿಸಿರೋ ಇಲಾಖೆ, ವ್ಯವಹಾರಿಕ ಉದ್ದೇಶಗಳಿಗೆ ಮಾತ್ರ ಪ್ರದರ್ಶನ ಮಳಿಗೆಗಳನ್ನ ಬಳಸಲು ಸಲಹೆ ನೀಡಿದೆ. ಸಭೆ ಹಾಗೂ ಸಮಾರಂಭಗಳು ನಡೆಯುವ ಸ್ಥಳಗಳಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಜನ ಸೇರದಂತೆ ಎಚ್ಚರಿಕೆ ನೀಡಿದೆ. ಕಂಟೈನ್ಮೆಂಟ್ ಝೋನ್ಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಹೇಳಿದೆ.
ಹಾಗೂ ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮುಂಜಾಗೃತಾ ಕ್ರಮಗಳನ್ನ ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸುವಂತೆ ಸೂಚಿಸಿದೆ.