Saturday, 08 Aug, 7.13 am News First Live

ಬೆಂಗಳೂರು
ಕೊರೊನಾ ವಾರಿಯರ್ಸ್​ಗೆ ಉಚಿತ ಚಿಕಿತ್ಸೆ..ಮೃತರ ಕುಟುಂಬಕ್ಕೆ ₹30 ಲಕ್ಷ ಪರಿಹಾರ

ಬೆಂಗಳೂರು: ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಸರ್ಕಾರಿ ನೌಕರರು ಒಂದು ವೇಳೆ ಸೋಂಕಿಗೆ ಒಳಗಾದರೆ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಶ್ರೀ ರಾಮುಲು, ಕೋವಿಡ್-19 ಕೆಲಸಕ್ಕೆ ನಿಯೋಜನೆಗೊಂಡು, ಕಾರ್ಯಾಚರಣೆ ಸಮಯದಲ್ಲಿ ಸೋಂಕಿಗೆ ತುತ್ತಾಗುವ ಸರ್ಕಾರಿ ನೌಕರರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಹಾಗೆಯೇ, ನಿಯೋಜನೆಗೊಂಡವರು ಒಂದು ವೇಳೆ ಮೃತರಾದರೆ ಸರ್ಕಾರದ ವತಿಯಿಂದ 30 ಲಕ್ಷ ರೂ. ಪರಿಹಾರ ನೀಡಲಾಗುವುದು. ಈ ಕುರಿತು ಸರ್ಕಾರ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top