Thursday, 21 Jan, 10.48 pm News First Live

ಟಾಪ್ನ್ಯೂಸ್
ಕುಮಾರಸ್ವಾಮಿ ನೋಡಿದ್ರೆ ಅಯ್ಯೋ ಪಾಪ ಅನಿಸುತ್ತೆ -ಸಿಪಿ ಯೋಗೇಶ್ವರ್

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನ ನೋಡಿದರೆ ನನಗೆ ಅಯ್ಯೋ ಪಾಪ ಅನ್ಸುತ್ತೆ ಅಂತಾ ನೂತನ ಸಚಿವ ಸಿಪಿ ಯೋಗೇಶ್ವರ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯೋಗೇಶ್ವರ್.. ಕುಮಾರಸ್ವಾಮಿ ಅವ್ರಿಗೆ ಆತಂಕ ಎದುರಾಗಿದೆ. ಸಿಎಂ ಆಗಿದ್ದಾಗ ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡಲಿಲ್ಲ. ಸುಮ್ಮನೆ ಕ್ಷೇತ್ರದಲ್ಲಿ ಸುತ್ತು ಹಾಕ್ತಿದ್ದಾರೆ. ಈಗ ಸಚಿವರ ಮನೆಗಳಿಗೆ ಓಡಾಡ್ತಿದ್ದಾರೆ. ಇಂದು ಬೊಮ್ಮಾಯಿ ಮನೆಗೆಲ್ಲ ಹೋಗಿದ್ರು. ಇದನ್ನೆಲ್ಲಾ ನೋಡಿದ್ರೆ ಅಯ್ಯೋ ಪಾಪ ಅನ್ಸುತ್ತೆ ಅಂತಾ ಟಾಂಗ್ ನೀಡಿದರು.

ಹೆಚ್​​ಡಿಕೆ-ಡಿಕೆಎಸ್​ ಸಮಾನ ಶತ್ರುಗಳು
ರಾಮನಗರ, ಚನ್ನಪಟ್ಟಣ ಎರಡು ಕಣ್ಣುಗಳು ಇದ್ದಂತೆ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ.. ಪಾಪ‌ ಕುಮಾರಸ್ವಾಮಿ ಆಗಾಗೆ ಈ ರೀತಿ ಹೇಳ್ತಾನೆ ಇರ್ತಾರೆ. ಮೊದಲು ಬಿಜೆಪಿಯನ್ನ ಪ್ರೀತಿ ಮಾಡ್ತಿದ್ದರು. ಈಗ ನಮ್ಮ ಸಿಎಂ ವಿರುದ್ಧವೇ ಮಾತಾಡ್ತಾರೆ. ಅವರ ಜೊತೆ ಅಡ್ಜೆಸ್ಟ್ ಮೆಂಟ್ ರಾಜಕಾರಣ ಮಾಡಬಾರದು ಎಂದು ನಮ್ಮ ನಾಯಕರಿಗೆ ಹೇಳಿದ್ದೆ. ನಾನು ಮೊದಲಿನಿಂದಲೂ ಹೋರಾಟ ಮಾಡಿಕೊಂಡೇ ಬಂದಿದ್ದೇನೆ. ಡಿ.ಕೆ ಶಿವಕುಮಾರ್, ಕುಮಾರಸ್ವಾಮಿ ನನಗೆ‌ ಸಮಾನ ಶತ್ರುಗಳು. ನಾನು ಸಚಿವನಾಗಿರುವುದರಿಂದ ಅವರಿಗೆ ಭಯ ಆಗಿದೆ ಅಂತಾ ಹೇಳಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top