Friday, 20 Nov, 6.54 am News First Live

ಸಿನಿಮಾ
ಲಾಕ್​ಡೌನ್ ಬಳಿಕ ಮೊದಲ ಕನ್ನಡ ಸಿನಿಮಾ ರಿಲೀಸ್: ಇಂದಿನಿಂದ ಆಯಕ್ಟ್ 1978 ಆರ್ಭಟ

ಬೆಂಗಳೂರು: ಕೊರೊನಾ ಲಾಕ್​ಡೌನ್​ ಜಾರಿಯಾಗಿ ಚಿತ್ರಮಂದಿರಗಳು ಬಂದ್​ ಆಗಿದ್ದರಿಂದ ಇಂಡಸ್ಟ್ರಿ ಮೇಲೆ ದೊಡ್ಡ ಹೊಡೆತ ಬಿದ್ದಿತ್ತು. ಕಳೆದ ತಿಂಗಳಿಂದ ಚಿತ್ರ ಮಂದಿರಗಳು ತೆರೆದಿದ್ದರೂ ಕೂಡ ಯಾವುದೇ ಹೊಸ ಸಿನಿಮಾಗಳು ರಿಲೀಸ್​ ಆಗಿರಲಿಲ್ಲ. ಎಲ್ಲಾ ಹೊಸ ಸಿನಿಮಾಗಳ ನಿರ್ದೇಶಕ ಹಾಗೂ ನಿರ್ಮಾಪಕರು ಸಿನಿಮಾ ಕೈಯಲ್ಲಿ ಹಿಡಿದು ಕಾಯ್ತಿರುವಾಗಲೇ, ನಿರ್ದೇಶಕ ಮಂಸೋರೆ ಮಾತ್ರ ತಮ್ಮ ಆಯಕ್ಟ್ 1978 ಸಿನಿಮಾವನ್ನ ಇಂದು ರಿಲೀಸ್ ಮಾಡ್ತಿದ್ದಾರೆ.

ಲಾಕ್‌ಡೌನ್ ನಂತರ ಥಿಯೇಟರ್‌ನಲ್ಲಿ ರಿಲೀಸ್ ಆಗ್ತಿರೋ ಮೊದಲ ಕನ್ನಡ ಸಿನಿಮಾ ಇದಾಗಿದೆ. ನಟಿ ಯಜ್ಞಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದು, ಪ್ರಮೋದ್​ ಶೆಟ್ಟಿ, ಸಂಚಾರಿ ವಿಜಯ್​, ಶ್ರುತಿ, ಬಿ.ಸುರೇಶ್, ಅಚ್ಯುತ್ ಕುಮಾರ್ ಸೇರಿದಂತೆ 48 ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

'ಹರಿವು' ಹಾಗೂ 'ನಾತಿಚರಾಮಿ' ಸಿನಿಮಾಗಳ ನಿರ್ದೇಶಕ ಮಂಸೋರೆ ನಿರ್ದೇಶಿಸಿರುವ ಸಿನಿಮಾಗಳಲ್ಲಿ, 'ಆಯಕ್ಟ್-1978' ವಿಭಿನ್ನ ಕಥಾಹಂದರವನ್ನ ಹೊಂದಿದೆ. ಪ್ರೇಕ್ಷಕರು ಈಗಾಗಲೇ ಚಿತ್ರದ ಟ್ರೈಲರ್​ ಇಷ್ಟಪಟ್ಟು, ಸಿನಿಮಾಗಾಗಿ ಎದುರು ನೋಡುತ್ತಿದ್ದರು. ನಟ ಕಿಚ್ಚ ಸುದೀಪ್ ಈಗಾಗಲೇ ಸಿನಿಮಾವನ್ನ ವೀಕ್ಷಿಸಿದ್ದು, ಚಿತ್ರತಂಡದ ಶ್ರಮ ಅದ್ಭುತವಾಗಿದೆ. ಎಲ್ಲರಿಗೂ ಶುಭವಾಗಲಿ ಅಂತ ಹಾರೈಸಿದ್ದಾರೆ.

ನೆನ್ನೆಯಷ್ಟೇ 'ಆಯಕ್ಟ್​-1978' ಸಿನಿಮಾದ ಸೆಲೆಬ್ರಿಟಿ ಶೋ ನಡೆದಿದೆ. ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ತಿದೆ. ಇಂದಿನಿಂದ ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗ್ತಿದೆ. ಮೇನ್ ಥಿಯೇಟರ್ ವೀರೇಶ್​ನಲ್ಲಿ ಮೊದಲ ಪ್ರದರ್ಶನಕ್ಕೆ ಸಕಲ ಸಿದ್ಧತೆ ನಡೀತಿದೆ. ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top