Monday, 21 Sep, 9.12 am News First Live

ದೇಶ
ಲಡಾಖ್​ ವಾಯುಪ್ರದೇಶದಲ್ಲಿ ರಫೇಲ್​ ಯುದ್ಧವಿಮಾನಗಳ ಹಾರಾಟ

ಲಡಾಖ್​​: ಭಾರತ-ಚೀನಾ ನಡುವೆ ಗಡಿಯಲ್ಲಿ ಉದ್ವಿಗ್ನತೆ ದಿನೇದಿನೇ ಹೆಚ್ಚಾಗುತ್ತಿರುವ ಬೆನ್ನಲ್ಲೇ ಲಡಾಖ್​ ವಾಯುಪ್ರದೇಶದಲ್ಲಿ ರಫೇಲ್​ ಯುದ್ಧವಿಮಾನಗಳು ಹಾರಾಟ ನಡೆಸಿವೆ.

ಕಳೆದ ಜುಲೈನಲ್ಲಿ ಫ್ರಾನ್ಸ್​ನಿಂದ ಬಂದಿಳಿದ ಐದು ರಫೇಲ್​ ಜೆಟ್​​ಗಳನ್ನ, ಸೆಪ್ಟೆಂಬರ್​​ 10ರಂದು ಸೇನೆಗೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇದರ ಬೆನ್ನಲ್ಲೇ ಇತ್ತೀಚೆಗೆ ಪೈಲೆಟ್​ಗಳು ಅಂಬಾಲಾ ವಾಯುನೆಲೆಯಿಂದ ಲಡಾಖ್​ವರೆಗೂ ಹಾರಾಟ ನಡೆಸಿ, ರಫೇಲ್​ ವಿಮಾನಗಳ ಕಾರ್ಯಾಚರಣೆಗೆ ಅಲ್ಲಿನ ವಾತಾವರಣದ ಪರಿಚಯ ಮಾಡಿಕೊಂಡಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಕಳೆದ ಐದು ತಿಂಗಳಿಂದ ಭಾರತ ಹಾಗೂ ಚೀನಾ ಮಧ್ಯೆ ಗಡಿ ಬಿಕ್ಕಟು ಉಂಟಾಗಿದೆ. ಇದರ ನಡುವೆಯೇ ರಫೇಲ್​ ಯುದ್ಧ ವಿಮಾನಗಳು ಲಡಾಖ್​ನಲ್ಲಿ ಹಾರಾಟ ನಡೆಸುವ ಮೂಲಕ ಭಾರತ ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ ಅನ್ನೋ ಸ್ಪಷ್ಟ ಸಂದೇಶವನ್ನ ಡ್ರ್ಯಾಗನ್​ ರಾಷ್ಟ್ರಕ್ಕೆ ರವಾನಿಸಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top