Monday, 25 Jan, 8.11 am News First Live

ದೇಶ
ಮದ್ಯ ಖರೀದಿಗೆ ಯುಪಿ ಸರ್ಕಾರದಿಂದ ಹೊಸ ಷರತ್ತು

ಲಖನೌ: ಮದ್ಯ ಖರೀದಿ ಮತ್ತು ಮದ್ಯ ಶೇಖರಣೆ ವಿಷಯವಾಗಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ, ಅಬಕಾರಿ ನೀತಿಯಡಿ ಹೊಸ ಕಾಯ್ದೆ ಜಾರಿಗೆ ತಂದಿದೆ.

ವೈಯಕ್ತಿಕ ಬಳಕೆಗಾಗಿ ಅಥವಾ ವೈಯಕ್ತಿಕ ಬಾರ್‌ಗಾಗಿ ಮದ್ಯದ ಪರವಾನಗಿ ಪಡೆಯಲು ಅವಕಾಶ ನೀಡಿದೆ. ವೈಯಕ್ತಿಕ ಬಳಕೆಗಾಗಿ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಖಾಸಗಿ ಸ್ವಾಮ್ಯದ ಮದ್ಯ ಖರೀದಿಸಲು, ಸಾಗಿಸಲು ಪರವಾನಗಿ ಪಡೆಯಬೇಕಾಗುತ್ತೆ. ಒಬ್ಬ ವ್ಯಕ್ತಿ ಕೇವಲ 6 ಲೀಟರ್ ಮದ್ಯ ಖರೀದಿಸುವ, ಶೇಖರಿಸುವ ಮಿತಿ ನಿಗದಿಪಡಿಸಲಾಗಿದೆ.

ಇದಕ್ಕಿಂತ ಹೆಚ್ಚಿನ ಮದ್ಯ ಹೊಂದಲು ಅಬಕಾರಿ ಇಲಾಖೆಯಿಂದ ಪರವಾನಗಿ ಪಡೆಯಬೇಕು. ಇದಕ್ಕಾಗಿ ಪ್ರತಿ ವರ್ಷ ₹12,000 ಪರವಾನಗಿ ಶುಲ್ಕ ಮತ್ತು ₹51,000 ಭದ್ರತಾ ಮೊತ್ತ ನಿಗದಿಪಡಿಸಿ ಷರತ್ತುಗಳನ್ನು ವಿಧಿಸಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top