Sunday, 27 Sep, 12.53 pm News First Live

ವಿಜಯಪುರ
ಮಳೆಯಿಂದ ಅಂತರ್ಜಲ ಹೆಚ್ಚಳ; ತಂತಾನೇ ಚಿಮ್ಮುತ್ತಿರುವ ಬೋರ್​ವೆಲ್​ ನೀರು

ವಿಜಯಪುರ: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ದೋಣಿ ನದಿ ತುಂಬಿ ಹರಿಯುತ್ತಿದೆ. ಇತ್ತ ತಾಳೀಕೋಟೆ ಪಟ್ಟಣದ ರೈತರೊಬ್ಬರ ಜಮೀನಿನಲ್ಲಿರುವ ಬೋರ್​ವೆಲ್​ನಲ್ಲಿ ತಂತಾನೇ ನೀರು ಚಿಮ್ಮುತ್ತಿದ್ದು ಜನರಲ್ಲಿ ಅಚ್ಚರಿ ಮೂಡಿಸಿದೆ.

ಗ್ರಾಮದ ರೈತ ಬಸವರಾಜ ಕುಂಬಾರ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಈ ರೀತಿ ತಂತಾನೆ ನೀರು ಹೊರಹೊಮ್ಮುತ್ತಿದೆ. ನದಿ ನೀರಿನ ಹೆಚ್ಚಳದಿಂದ ಅಂತರ್ಜಲ ಹೆಚ್ಚಳವಾಗಿದೆ. ಆದ್ದರಿಂದಲೇ ಮೋಟರ್​ ಆನ್​ ಮಾಡದೆಯೂ ನೀರು ಹರಿಯುತ್ತಿದೆ ಎನ್ನಲಾಗಿದೆ.

ಬಸವರಾಜ ಅವರು ತನ್ನ 7 ಎಕರೆ ಜಮೀನಿನಲ್ಲಿ ಕಬ್ಬು ಮತ್ತು ತರಕಾರಿ ಬೆಳೆದಿದ್ದಾರೆ. ಬೋರ್​ನಿಂದ ನೀರು ಚಿಮ್ಮುತ್ತಿರೋ, ಬೆಳೆಗಳು ನೀರಿನಿಂದ ತುಂಬಿಹೋಗಿವೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top