Wednesday, 21 Oct, 1.10 pm News First Live

ರಾಜಕೀಯ
ಮುನಿರತ್ನ ಬೆಂಬಲಿಗರಿಂದ 'ಕೈ'​​ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ; ಡಿಕೆ ಸುರೇಶ್ ದೂರು

ಬೆಂಗಳೂರು: ಆರ್.ಆರ್ ನಗರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಬೆಂಬಲಿಸಿ ಬಿಜೆಪಿಗೆ ಸೇರಿರುವ ವೇಲು ನಾಯ್ಕ ಅನ್ನೋರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಸಂಸದ ಡಿಕೆ ಸುರೇಶ್, ಮಾಜಿ ಸಚಿವ ರಾಮಲಿಂಗ ರೆಡ್ಡಿ, ಎಚ್.ಎಂ ರೇವಣ್ಣ ನಂದಿನಿ ಲೇಔಟ್​ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ.

ಆರೋಪಕ್ಕೆ ಸಂಬಂಧಿಸಿದಂತೆ ನೂಕು, ನುಗ್ಗಲು ಸಂಭವಿಸಿರುವ ಸಿಸಿಟಿವಿ ವಿಡಿಯೋ ಲಭ್ಯವಾಗಿದೆ. ಅಂದ್ಹಾಗೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿರುವ ವೇಲು ನಾಯ್ಕ್​, ಇತ್ತೀಚೆಗೆ ಕಾಂಗ್ರೆಸ್​ನಿಂದ ಬಿಜೆಪಿಗೆ ಸೇರಿದ್ದ. ಅಲ್ಲದೇ ಮಾಜಿ ಕಾರ್ಪೊರೇಟ್​ ಕೂಡ ಆಗಿದ್ದ ಎನ್ನಲಾಗಿದೆ.

ವೇಲು ಲಕ್ಷ್ಮಿದೇವಿನಗರ ವಾರ್ಡ್​ನಲ್ಲಿ ಕಾಂಗ್ರೆಸ್ ನಿಂದ ಗೆದ್ದು ಪಾಲಿಕೆ ಸದಸ್ಯರಾಗಿದ್ದರು. ಮುನಿರತ್ನ ಅವರ ಕಟ್ಟಾ ಬೆಂಬಲಿಗರಾಗಿದ್ರಿಂದ ಬಿಜೆಪಿ ಸೇರಿಕೊಂಡಿದ್ದಾರೆ ಅಂತಾ ಹೇಳಲಾಗಿದೆ. ಹಲ್ಲೆ ಆರೋಪ ಸಂಬಂಧ ವೇಲು ನಾಯ್ಕ್ ವಿರುದ್ಧ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮುನಿರತ್ನ ಬೆಂಬಲಿಗರ ಹಲ್ಲೆ ಹಿನ್ನಲೆ ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಬಂಧನಕ್ಕೆ ಕೈಕಾರ್ಯಕರ್ತರು ಆಗ್ರಹ ಮಾಡಿದ್ದಾರೆ. ಹಲ್ಲೆಯನ್ನ ಖಂಡಿಸಿ ನಂದಿನಿ ಲೇಔಟ್ ಪೊಲೀಸ್ ಸ್ಟೇಷನ್ ಮುಂದೆ ಕಾಂಗ್ರೆಸ್​ ಮುಖಂಡರು ಜಮಾಯಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top