Monday, 09 Nov, 8.12 pm News First Live

ರಾಜ್ಯ
ಪದವಿ ತರಗತಿಗಳ ಆರಂಭಕ್ಕೆ ಉನ್ನತ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಕೊರೊನಾ ಹಿನ್ನೆಲೆ ಮುಚ್ಚಲಾದ ಶಾಲಾ ಕಾಲೇಜುಗಳನ್ನು ಪುನರಾರಂಭಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ನವೆಂಬರ್ 17 ರಂದು ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಾಲೇಜು ಆರಂಭಿಸುವ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಉನ್ನತ ಶಿಕ್ಷಣ ಇಲಾಖೆ ಮಾರ್ಗಸೂಚಿಯ ಮುಖ್ಯಾಂಶಗಳು

 • ಮಾಸ್ಕ್, ಸ್ಯಾನಿಟೈಸರ್ ದೈಹಿಕ ಅಂತರ ಕಡ್ಡಾಯ.
 • ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ಕೊರೊನಾ ಟೆಸ್ಟ್ ಕಡ್ಡಾಯ.
 • ಕಾಲೇಜು ಪ್ರಾರಂಭಕ್ಕೆ ‌ಮೂರು ದಿನ‌ ಮುಂಚೆ ಕೊರೊನಾ ಪರೀಕ್ಷೆ ಮಾಡಿಸಬೇಕು.
 • ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರ ಕಾಲೇಜಿಗೆ ಪ್ರವೇಶ
 • ಸಾಮಾಜಿಕ ಅಂತರ 6 ಅಡಿಯಷ್ಟು ಪಾಲನೆ‌ ಮಾಡಬೇಕು
 • ಶುಚಿತ್ವ,‌ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಡ್ಡಾಯವಾಗಿ ಮಾಡಬೇಕು.
 • ಕಾಲೇಜು ಆವರಣವನ್ನ ಸ್ವಚ್ಛವಾಗಿಟ್ಟುಕೊಳ್ಳಬೇಕು.
 • ಖಾಸಗಿ ವಾಹನಗಳು ಹಾಗೂ ಕಾಲೇಜು ಬಸ್​ಗಳನ್ನು ಸತತವಾಗಿ ಸ್ಯಾನಿಟೈಸೇಶನ್​ ಮಾಡಬೇಕು.
 • ಕೈಗಳನ್ನು ಸೋಪಿನಿಂದ 40-60 ಸೆಕೆಂಡ್​ಗಳ ಕಾಲ ಸತತವಾಗಿ ತೊಳೆಯಬೇಕು.
 • ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಗಮನ ನೀಡಲು ಕಡ್ಡಾಯವಾಗಿ ಆರೋಗ್ಯ ಸಮಿತಿ ರಚನೆ ಮಾಡಬೇಕು.
 • ಕಾಲೇಜು ಆವರಣದಲ್ಲಿ ಉಗುಳುವುದನ್ನ ಕಡ್ಡಾಯವಾಗಿ ನಿಷೇಧಿಸಬೇಕು.
 • ವಿದ್ಯಾರ್ಥಿಗಳು ಕಡ್ಡಾಯವಾಗಿ ಆರೋಗ್ಯ ಸೇತು ಆಯಪ್​ ಡೌನ್​ಲೋಡ್ ಮಾಡಿಕೊಂಡಿರಬೇಕು.

ಕಾಲೇಜು ಆರಂಭಕ್ಕೆ ಕೈಗೊಳ್ಳಬೇಕಾದ ಪೂರ್ವ ಸಿದ್ಧತೆಗಳು.

 • ಯುಜಿಸಿ ಹಾಗೂ ಮಿನಿಸ್ಟರಿ ಆಫ್ ಎಜುಕೇಶನ್ ಗೈಡ್​​ಲೈನ್ಸ್ ಕಡ್ಡಾಯವಾಗಿ ಪಾಲನೆ ಮಾಡಬೇಕು.
 • ಕಾಲೇಜು ಆರಂಭಕ್ಕಿಂತ ಮೊದಲು ಆರೋಗ್ಯ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಯಿಂದ- ಕೋವಿಡ್ 19 ನಿಂದ ಪ್ರದೇಶ ಸುರಕ್ಷಿತವಾಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು.
 • ಯುಜಿಸಿ ಗೈಡ್ ಲೈನ್ಸ್ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಗೈಡ್ ಲೈನ್ ಕಡ್ಡಾಯ ಪಾಲನೆ ಮಾಡಬೇಕು.
 • ಆರೋಗ್ಯ ಹಿತದೃಷ್ಟಿಯಿಂದ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಎಲ್ಲಾ ವಿವಿಗಳು ಪಾಲಿಸಬೇಕು.
 • ಕಂಟೋನ್ಮೆಂಟ್ ಜೋನ್ ಹೊರಗೆ ಇರುವ ಕಾಲೇಜು ಹಾಗೂ ವಿವಿಗಳನ್ನು ತೆರೆಯಬಹುದು.
 • ಕಂಟೋನ್ಮೆಂಟ್ ಜೋನ್​ನಲ್ಲಿರುವ ವಿದ್ಯಾರ್ಥಿಗಳು, ಸಿಬ್ಬಂದಿ ಕಾಲೇಜಿಗೆ ಬರುವಂತಿಲ್ಲ.
 • ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಆರೋಗ್ಯ ಸೇತು ಆಯಪ್ ಹೊಂದಿರಬೇಕು.
 • ಕಾಲೇಜುಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸ್ ಕಡ್ಡಾಯವಾಗಿ ಮಾಡಬೇಕು.
 • ವಿದ್ಯಾರ್ಥಿಗಳ ಆರೋಗ್ಯದ ಕಡೆ ಗಮನ ಹರಿಸಬೇಕು.
 • ತರಗತಿಗಳನ್ನ ಆರಂಭ ಮಾಡೋದಕ್ಕೆ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು.
 • ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಗುಂಪು ಸೇರಿದಂತೆ ನೋಡಿಕೊಳ್ಳಬೇಕು.
 • ವಿದೇಶಿ ವಿದ್ಯಾರ್ಥಿಗಳಿಗೆ ಆನ್​ಲೈನ್ ನಲ್ಲಿ ಪಾಠ ಮುಂದುವರಿಸುವ ಅವಕಾಶ.
 • ಹವಾನಿಯಂತ್ರಿತ ಅತಿಹೆಚ್ಚಾಗಿ ಬಳಸಬಾರದು. 24c ರಿಂದ 30c ನಿರ್ವಹಣೆ ‌ಮಾಡಬೇಕು.
 • ಕಾಲೇಜು ತರಗತಿಯೊಳಗೆ ಬೆಳಕು ಹಾಗೂ ಗಾಳಿಯ ಪ್ರಮಾಣ ಚೆನ್ನಾಗಿರಬೇಕು.
 • ಕಾಲೇಜುಗಳಲ್ಲಿ ಸ್ವಿಮ್ಮಿಂಗ್ ಪೂಲ್ ಇದ್ರೆ ಅವುಗಳನ್ನು ತೆರೆಯಬಾರದು.
 • ಕಾಲೇಜಿನ ಎಲ್ಲಾ ಸಿಬ್ಬಂದಿಗಳು ವಯಸ್ಸಾದವರು, ಪ್ರಗ್ನೆಂಟ್ ಇದ್ದವರು ಜಾಗರೂಕರಾಗಿರಬೇಕು. ಇವರು ವಿದ್ಯಾರ್ಥಿಗಳ ನೇರ ಸಂಪರ್ಕ ಇಟ್ಟುಕೊಳ್ಳಬಾರದು.
 • ತೀರ ಅಗತ್ಯ ಇದ್ರೆ ಹಾಸ್ಟೆಲ್ ಓಪನ್ ಮಾಡಬೇಕು.
 • ರೋಗ ಲಕ್ಷಣ ಇರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್​​ನಲ್ಲಿ ಉಳಿದುಕೊಳ್ಳಲು ಅವಕಾಶ ಇಲ್ಲ.
 • ಹೊರ ರಾಜ್ಯ ಹೊರ ಜಿಲ್ಲೆಯಿಂದ ಬರುವ ವಿದ್ಯಾರ್ಥಿಗಳಿಗೆ 14 ದಿನ ಕ್ವಾರೆಂಟೈನ್ ಮುಗಿಸಿ ತರಗತಿಗೆ ಪ್ರವೇಶ
 • ಹಾಸ್ಟೆಲ್​​ನಲ್ಲಿ ಗುಂಪು ಗುಂಪಾಗಿ ಸೇರುವಂತಿಲ್ಲ.
 • ಊಟದ ಹಾಲ್, ಆಟದ ಮೈದಾನ, ಕೊಠಡಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.
 • ಹಾಸ್ಟೆಲ್ ನಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಮಾಸ್ಕ್, ಸ್ಯಾನಿಟೈಸ್ ಕಡ್ಡಾಯ ಧರಿಸಬೇಕು.

ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್​ ನಾರಾಯಣ್​ ಟ್ವೀಟ್​ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳು ಹಾಗೂ ಪೋಷಕರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top