Tuesday, 22 Sep, 10.11 am News First Live

ರಾಜ್ಯ
ರೈತರ ಧರಣಿ, ಫ್ರೀಡಂ ಪಾರ್ಕ್ ಬಳಿ ಪೋಲಿಸರಿಂದ ಬಿಗಿ ಭದ್ರತೆ

ಬೆಂಗಳೂರು: ಎಪಿಎಂಸಿ, ವಿದ್ಯುತ್ ಹಾಗೂ ಭೂಸುಧಾರಣಾ ಕಾಯ್ದೆ ಸುಗ್ರೀವಾಜ್ಞೆ ವಿರೋಧಿಸಿ ನಗರದಲ್ಲಿ ರೈತರು ನಡೆಸುತ್ತಿರೋ ಪ್ರತಿಭಟನೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆ ಪ್ರತಿಭಟನಾ ಸ್ಥಳವಾದ ಫ್ರೀಡಂ ಪಾರ್ಕ್ ಬಳಿ ಪೊಲೀಸರು ಇಂದು ಮಾರ್ನಿಂಗ್ ಪರೇಡ್​ ನಡೆಸಿದ್ದು, ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಪ್ರತಿಭಟನೆ ಹಿನ್ನೆಲೆ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಪೋಲಿಸ್ ಅಧಿಕಾರಿಗಳಿಂದ ಸೂಚನೆ ನೀಡಲಾಗಿದೆ. ಹೀಗಾಗಿ ಫ್ರೀಡಂ‌ ಪಾರ್ಕ್​​ನ ಎರಡು ಬದಿಗಳಲ್ಲಿ ಬ್ಯಾರೀಕೆಡ್ ಹಾಕಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಪ್ರತಿಭಟನಾಕಾರರನ್ನ ರಸ್ತೆಗೆ ಬಿಡದಿರಲು ಪೊಲೀಸ್​ ಸಿಬ್ಬಂದಿಗೆ ಖಡಕ್ ಆರ್ಡರ್ ನೀಡಲಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top