Saturday, 21 Nov, 7.15 pm News First Live

ಟಾಪ್ನ್ಯೂಸ್
ರಮೇಶ್ ಜಾರಕಿಹೊಳಿ ಮತ್ತೊಂದು ಪವರ್​ ಸೆಂಟರ್ ಅಲ್ಲ- ರೇಣುಕಾಚಾರ್ಯ

ಬೆಂಗಳೂರು: ಸಚಿವ ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗಿ ಬಂದ ಹಿನ್ನೆಲೆ ಇಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ರಮೇಶ್ ಜಾರಕಿಹೊಳಿಯನ್ನ ಭೇಟಿಯಾಗಿದ್ದಾರೆ.

ಭೇಟಿ ನಂತರ ಮಾತನಾಡಿದ ರೇಣುಕಾಚಾರ್ಯ.. ರಮೇಶ್ ಜಾರಕಿಹೊಳಿಯವ್ರನ್ನು ನೀರಾವರಿ ವಿಚಾರವಾಗಿ ಭೇಟಿ ಮಾಡಿದ್ದೆ. ರಮೇಶ್ ಜಾರಕಿಹೊಳಿಯವ್ರು ಸಂತೋಷ್ ಭೇಟಿ ಮಾಡಿದ್ರಲ್ಲಿ ತಪ್ಪೇನಿದೆ. ಸಂತೋಷ್ ಅವ್ರು ನಮ್ಮ ಸಂಘಟನಾ ಪ್ರಧಾನ ಕಾರ್ಯದರ್ಶಿ ಎಂದರು.

ಸಂಪುಟ ವಿಸ್ತರಣೆ ವಿಚಾರದಲ್ಲಿ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿ.. ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಅವ್ರು ಈಗಾಗಲೇ ದೆಹಲಿಯಲ್ಲಿ ಚರ್ಚೆ ಮಾಡಿ ಬಂದಿದ್ದಾರೆ. ಯಾಕೆ ವಿಳಂಬವಾಗ್ತಿದೆ ಅಂತ ಸಿಎಂಗೆ ಕೇಳುವಷ್ಟು ನಾನು ದೊಡ್ಡವನಲ್ಲ. ನಾನು ತಾಳ್ಮೆಯಿಂದ ಕಾಯುತ್ತೇನೆ, ಮನುಷ್ಯನಿಗೆ ತಾಳ್ಮೆ ಸಂಯಮ ಬಹಳ ಮುಖ್ಯ. ಸಿಎಂ, ರಾಜ್ಯಾಧ್ಯಕ್ಷರ ನಿರ್ಧಾರಕ್ಕೆ ನಾನು ಬದ್ಧ ಎಂದಿದ್ದಾರೆ.

ಸಚಿವರ ಪ್ರತ್ಯೇಕ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ ಅವರು.. ನಾವು ಶಾಸಕರು ರೆಸಾರ್ಟ್​ನಲ್ಲಿ ಸಭೆ ಮಾಡಿಲ್ಲ. ಸಿಎಂ ಮತ್ತು ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿದ್ದೀವಿ. ನಮ್ಮ ಅಭಿಪ್ರಾಯಗಳನ್ನು ಪಕ್ಷದ ವೇದಿಕೆಯಲ್ಲಿ ಹೇಳಿದೀವಿ. ರಮೇಶ್ ಜಾರಕಿಹೊಳಿ ಮತ್ತೊಂದು ಪವರ್ ಸೆಂಟರ್ ಅಲ್ಲ. ಯಾಕೆ ಮಾಧ್ಯಮಗಳು ಅವರನ್ನ ಮತ್ತೊಂದು ಪವರ್ ಸೆಂಟರ್ ಅಂತೀರಿ?? ರಮೇಶ್ ಜಾರಕಿಹೊಳಿಯವನ್ನು ವಿನಾಕಾರಣ ಪವರ್ ಸೆಂಟರ್ ಅನ್ನೋದು ಸರಿಯಲ್ಲ. ರಮೇಶ್ ಜಾರಕಿಹೊಳಿ ಸಂತೋಷ್ ಅವರನ್ನ ಭೇಟಿ ಮಾಡಿದ್ದರಲ್ಲಿ ತಪ್ಪಿಲ್ಲ. ನಾನೂ ದೆಹಲಿಗೆ ಹೋದರೆ ಸಂತೋಷ್ ಅವ್ರನ್ನ ಭೇಟಿ ಮಾಡಿಬರ್ತೀನಿ. ಅವ್ರನ್ನ ಬಿಟ್ಟು ಇನ್ಯಾರನ್ನ ಭೇಟಿ ಮಾಡಬೇಕು? ಎಂದಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top