Thursday, 24 Sep, 4.54 pm News First Live

ಸಿನಿಮಾ
ಸೆಟ್​ಗೆ ಬಂದ ಸುಧಾಕರ್.. ಶಾಟ್​ ರೆಡಿ ಅನ್ನೋವಷ್ಟರಲ್ಲಿ ಸಾವು; ನಿರ್ದೇಶಕರ ಬೇಸರ

ಕನ್ನಡ ಚಿತ್ರರಂಗದ ಪೋಷಕ ನಟ ರಾಕ್​ಲೈನ್​ ಸುಧಾಕರ್​ ತೀವ್ರ ಹೃದಯಾಘಾತದಿಂದ ಇಂದು ವಿಧಿವಶರಾಗಿದ್ದಾರೆ. ಎಂದಿನಂತೆ ಇಂದು ಬೆಳಿಗ್ಗೆ 'ಶುಗರ್​ಲೆಸ್'​ ಸಿನಿಮಾದ ಶೂಟಿಂಗ್​ಗೆ ತೆರಳಿದ್ದರು. ತಮ್ಮನ್ನ ಸ್ಯಾನಿಟೈಸ್​ ಮಾಡಿಕೊಂಡು, ಮೇಕಪ್​ ಹಾಕಿ ರೆಡಿಯಾಗಿದ್ದಾರಂತೆ. ಬಣ್ಣ ಹಚ್ಚಿರುವ ಹಾಗೇ ಇಹಲೋಕ ತ್ಯಜಿಸಿದ್ದಾರೆ. ಈ ಬಗ್ಗೆ 'ಶುಗರ್​ಲೆಸ್' ಸಿನಿಮಾದ ನಿರ್ದೇಶಕ ಶಶಿಧರ್​ ನ್ಯೂಸ್​ ಫಸ್ಟ್​ಗೆ ಜೊತೆ ಮಾತನಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

'ಬೆಳಿಗ್ಗೆ ಎಂದಿನಂತೆ ಲವಲವಿಕೆಯಿಂದಲೇ ಶೂಟಿಂಗ್​ಗೆ ಸೆಟ್​ಗೆ ಬಂದ್ರು. ಸ್ಯಾನಿಟೈಸ್​ ಮಾಡಿಕೊಂಡು, ತಿಂಡಿ ತಿಂದ್ರು. ಅನಂತರ ಮೇಕಪ್​ ಹಚ್ಕೊಂಡು ಹತ್ತು ನಿಮಿಷ ರೆಸ್ಟ್​ ಮಾಡ್ತೀನಿ ಅಂತ ಹೇಳಿ ರೆಸ್ಟ್​ ಮಾಡೋಕೆ ಹೋದ್ರು. ಶಾಟ್​ ರೆಡಿಯಾಗಿದೆ ಅಂತ ಕರೆಯೋದಕ್ಕೆ ಹೋದಾಗ, ಅವರು ಮಾತನಾಡಲೇ ಇಲ್ಲ. ನನಗೆ ಗಾಬರಿಯಾಗಿ ಅವರ ಮಗನಿಗೆ ಕಾಲ್​ ಮಾಡ್ದೆ. ಅವರ ಮಗ ಅಂಬ್ಯುಲೆನ್ಸ್​ ಸಮೇತ ಶೂಟಿಂಗ್​ ಸೆಟ್​ಗೆ ಬಂದ್ರು. ಬನ್ನೇರುಘಟ್ಟ​ ರಸ್ತೆಯಲ್ಲಿ ಶೂಟಿಂಗ್​ ಸೆಟ್​ ಹಾಕಿದ್ವಿ. ದುರ್ದೈವ, ಅವರ ಮಗ ಬರುವಷ್ಟರಲ್ಲಿ ರಾಕ್​ಲೈನ್​ ಸುಧಾಕರ್ ಅವರು ನಿಧನರಾಗಿದ್ರು. ಇನ್ನು ನನ್ನ ಮೊದಲ ನಿರ್ದೇಶನದ ಚಿತ್ರದ ಶೂಟಿಂಗ್ ವೇಳೆ ಅವರು ನಮ್ಮನ್ನ ಬಿಟ್ಟು ಹೋಗಿರೋದು ನನಗೆ ತುಂಬಾ ನೋವಿನ ಸಂಗತಿ.'

- ಶಶಿಧರ್​, ಶುಗರ್​ಲೆಸ್​​ ಸಿನಿಮಾ ನಿರ್ದೇಶಕ

ಒಟ್ಟಿನಲ್ಲಿ ರಾಕ್​​ಲೈನ್ ಸುಧಾಕರ್ ನಿಧನದೊಂದಿಗೆ ಸ್ಯಾಂಡಲ್​ವುಡ್ ಅತ್ಯುತ್ತಮ ನಟನೊಬ್ಬನನ್ನು ಕಳೆದುಕೊಂಡಂತೆ ಆಗಿರೋದು ಸುಳ್ಳಲ್ಲ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top