Sunday, 24 Jan, 7.14 am News First Live

ಟಾಪ್ನ್ಯೂಸ್
ಶಶಿಕಲಾ ಬೆನ್ನಲ್ಲೇ ನಾದಿನಿ ಇಳವರಸಿಗೂ ಕೊರೊನಾ ಪಾಸಿಟಿವ್

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ಕೊರೊನಾ ಸೋಂಕಿಗೀಡಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಕಳೆದ 4 ವರ್ಷಗಳಿಂದ ಶಶಿಕಲಾ ಜೊತೆ ಜೈಲಿನಲ್ಲಿ ಒಂದೇ ಸೆಲ್​​ನಲ್ಲಿದ್ದ ಅವರ ನಾದಿನಿ ಇಳವರಸಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಶಶಿಕಲಾ ಅವರನ್ನು ದಾಖಲಿಸಿರೋ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಇಳವರಸಿಯನ್ನು ದಾಖಲಿಸೋ ಸಾಧ್ಯತೆಯಿದೆ. ಜನವರಿ 27ರಂದು ಶಶಿಕಲಾ ನಟರಾಜನ್ ಬಿಡುಗಡೆಯಾಗಲಿದ್ರೆ, ಇಳವರಸಿ ಫೆಬ್ರವರಿ 5ರಂದು ಬಿಡುಗಡೆಯಾಗಲಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top