Sunday, 24 Jan, 9.54 am News First Live

ಕ್ರಿಕೆಟ್
ಟೀಂ ಇಂಡಿಯಾದ 6 ಆಟಗಾರರಿಗೆ ಆನಂದ್​ ಮಹಿಂದ್ರಾರಿಂದ ಥಾರ್ SUV ಗಿಫ್ಟ್​

ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಮೂಲಕ ಪಾದಾರ್ಪಣೆ ಮಾಡಿದ ಐದು ಟೀಂ ಇಂಡಿಯಾ ಆಟಗಾರರು ಮತ್ತು ಶಾರ್ದುಲ್ ಠಾಕೂರ್ ​​ ಗೆ ತಲಾ ಒಂದು ಎಸ್ ‌ ಯುವಿ ಉಡುಗೊರೆ ನೀಡಲು ಉದ್ಯಮಿ , ಮಹಿಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ​ ಮಹೀಂದ್ರಾ ಮುಂದಾಗಿದ್ದಾರೆ . ನಿನ್ನೆ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ​ ಮಾಡಿ ಈ ಬಗ್ಗೆ ಘೋಷಿಸಿದ್ದಾರೆ .

ಮೊಹಮ್ಮದ್ ಸಿರಾಜ್ , ಶುಭ್ ​ ಮನ್ ಗಿಲ್ , ವಾಷಿಂಗ್ಟನ್ ಸುಂದರ್ , ಟಿ . ನಟರಾಜನ್ , ನವದೀಪ್ ಸೈನಿ ಮತ್ತು ಶಾರ್ದುಲ್ ಆಸ್ಟ್ರೇಲಿಯಾದಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನವನ್ನ ಆನಂದ್ ​ ಮಹಿಂದ್ರಾ ಮೆಚ್ಚಿದ್ದಾರೆ . ಸರಣಿ ಪಂದ್ಯ ಮತ್ತು ಬಾರ್ಡರ್ - ಗವಾಸ್ಕರ್ ಟ್ರೋಫಿಯನ್ನು ಗೆಲ್ಲಲು ನೆರವಾದ ಈ 6 ಆಟಗಾರರಿಗೆ , ಹೊಸ ಥಾರ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದಾರೆ .

ಯುವಕರು ತಮ್ಮ ಮೇಲೆ ತಾವು ನಂಬಿಕೆ ಇಡಬೇಕು . ಮತ್ತು ಈ ಹಿಂದೆ ಯಾರೂ ತುಳಿದಿರದ ಹಾದಿಯಲ್ಲಿ ಸಾಗಿ ಕಾರ್ಯಗಳನ್ನ ಮಾಡಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಉಡುಗೊರೆ ನೀಡಲಾಗ್ತಿದೆ ಎಂದು ಟ್ವೀಟ್​ನಲ್ಲಿ ಆನಂದ್​ ಮಹಿಂದ್ರಾ ತಿಳಿಸಿದ್ದಾರೆ .

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top