Thursday, 29 Oct, 5.14 pm News First Live

ಬೆಳಗಾವಿ
ಉಮೇಶ‌ ಕತ್ತಿ ಮಂತ್ರಿನೇ ಆಗಿಲ್ಲ, ಇನ್ನು ಸಿಎಂ ಆಗ್ತಾನ..? ರಮೇಶ ಕತ್ತಿ ಹಾಸ್ಯ ಚಟಾಕಿ

ಬೆಳಗಾವಿ: ಉಮೇಶ‌ ಕತ್ತಿ ಮಂತ್ರಿನ ಆಗವಲ್ಲಾ…ಇನ್ ಮುಖ್ಯಮಂತ್ರಿ ಹೆಂಗ್ ಅಕಾನ್ರಿ, ಉಮೇಶ‌ ಕತ್ತಿ ಈ ಸಂಪುಟದಲ್ಲಿ ಮಂತ್ರಿನೇ ಆಗಿಲ್ಲಾ ಇನ್ನೂ ಸಿಎಂ ಆಗ್ತಾನ ಅಂತಾ ಮಾಜಿ ಸಂಸದ ರಮೇಶ ಕತ್ತಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಉಮೆಶ್​ ಕತ್ತಿ ಹಿರಿಯ ರಾಜಕಾರಣಿ ಅನುಭವ ಜಾಸ್ತಿ ಇದೆ. ಮೂರು ಜನ ಸಿಎಂಗಳ ಕೈಯಲ್ಲಿ 13ವರ್ಷ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಾಕಷ್ಟು ರಾಜಕೀಯ ಅನುಭವ ಇದೆ.ಸಿಎಂ ಆಗುವ ಎಲ್ಲ ಅರ್ಹತೆ ಅವರಿಗಿದೆ. ಇದೇ ಕಾರಣಕ್ಕೆ ಉಮೇಶ‌ ಕತ್ತಿ ಸಿಎಂ ಆಗ್ತೀನಿ ಅಂತ ಹೇಳಿಕೆ ನೀಡಿದ್ದಾರೆ. ಉತ್ತರ‌ ಕರ್ನಾಟಕದವರು ಸಿಎಂ ಆಗಬೇಕೆಂದು ಜನರ ಬಯಕೆಯಾಗಿದೆ ಎಂದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top