Sunday, 24 Jan, 7.14 pm News First Live

ದೇಶ
ವಾಟ್ಸ್​ಆಯಪ್​ ಪ್ರೈವಸಿ ಪಾಲಿಸಿ ಭೀತಿ; ಹೊಸ ಆಯಪ್​ಗಳ ಮೊರೆ ಹೋದ ಉಗ್ರರು

ನವದೆಹಲಿ: ವಾಟ್ಸ್​ಆಯಪ್ ಕಂಪನಿ ಹೊಸ ಪ್ರೈವಸಿ ಪಾಲಿಸಿಗಳನ್ನು ಜಾರಿಗೆ ತರಲಾಗುವುದು ಎಂದು ಘೋಷಿಸುತ್ತಿದ್ದಂತೆಯೇ ಭಯೋತ್ಪಾದಕರು ವಾಟ್ಸ್‌ಆಯಪ್ ಮತ್ತು ಫೇಸ್​ಬುಕ್​ ಆಯಪ್​ಗಳ ಬದಲಿಗೆ ಹೊಸ ಆಯಪ್​ಗಳ ಬೆನ್ನುಬಿದ್ದಿದ್ದಾರೆ ಎನ್ನಲಾಗಿದೆ.

ಫೇಸ್​ಬುಕ್ ವಾಟ್ಸ್​​ ಆಯಪ್ ಬದಲಿಗೆ ಟರ್ಕಿ ಮೂಲದ ಆಯಪ್​ಗಳನ್ನು ಉಗ್ರರು ಬಳಸುತ್ತಿದ್ದಾರಂತೆ. ಇತ್ತೀಚೆಗೆ ಭಾರತೀಯ ಸೇನೆ ನಡೆಸಿದ ಎನ್​ಕೌಂಟರ್​​ಗಳಲ್ಲಿ ಬಂಧನಕ್ಕೊಳಗಾದ ಪಾಕಿಸ್ತಾನ ಮೂಲದ ಉಗ್ರರನ್ನು ವಿಚಾರಣೆಗೊಳಪಡಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಉಗ್ರರು ಬಳಸುತ್ತಿರುವ ಆಯಪ್​ಗಳ ಹೆಸರುಗಳನ್ನು ಭದ್ರತೆ ದೃಷ್ಟಿಯಿಂದ ಬಹಿರಂಗ ಪಡಿಸಿಲ್ಲ ಎನ್ನುವ ಮಾಹಿತಿ ಇದೆ.

ಈ ಆಯಪ್​ಗಳಲ್ಲಿ ಒಂದು ಅಮೆರಿಕಾ ಮೂಲದ್ದಾಗಿದ್ರೆ ಮತ್ತೊಂದು ಯೂರೂಪ್ ಮೂಲದ್ದಾಗಿದೆ. ಇನ್ನೊಂದು ಟರ್ಕಿ ದೇಶದ ಆಯಪ್ ಎನ್ನಲಾಗಿದೆ. ಈ ಆಯಪ್​ಗಳು 2G ಇಂಟರ್ನೆಟ್​ನಲ್ಲೂ ಸಹ ಕೆಲಸ ಮಾಡುವ ಸಾಮರ್ಥ್ಯ ಹೊಂದಿವೆಯಂತೆ.

ಉಗ್ರರು ಈ ಮೆಸೇಜಿಂಗ್ ಆಯಪ್​ಗಳನ್ನು ಕಾಶ್ಮೀರದ ಯುವಕರನ್ನು ಉಗ್ರರನ್ನಾಗಿ ಪರಿವರ್ತಿಸಲು ಬಳಸುತ್ತಿದ್ದು.. ಈ ಆಯಪ್​ಗಳು ಫೋನ್​ ನಂಬರ್​ ಅಥವಾ ಇ-ಮೇಲ್ ಅಡ್ರೆಸ್​ ಇಲ್ಲದೆಯೂ ಕಾರ್ಯನಿರ್ವಹಿಸುತ್ತಿವೆ ಎನ್ನಲಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top