Posts
5 ತಿಂಗಳ ಹಿಂದೆಯೇ ಕೊರೊನಾ ಬಗ್ಗೆ ಕರಾರುವಕ್ ಭವಿಷ್ಯ ನುಡಿದಿದ್ದ ಜ್ಯೋತಿಷಿ!

ಕೊರೊನಾ ಹಾವಳಿ ಇಂದು ಕಮ್ಮಿಯಾಗುತ್ತೆ, ನಾಳೆ ಹೆಚ್ಚಾಗುತ್ತದೆ ಎಂದು ಮಾರ್ಚ್ ತಿಂಗಳಿನಿಂದ ಈ ವರೆಗೆ ಹಲವು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು. ಅದರಲ್ಲಿ ಹೆಚ್ಚಿನವು ಪೊಳ್ಳಾಗಿದ್ದವು. ಯಾಕೆಂದರೆ, ಕೆಲವರು ಮೇ ತಿಂಗಳಲ್ಲೇ ಕೊರೊನಾ ಕಮ್ಮಿಯಾಗಲಿದೆ ಎಂದು ಭವಿಷ್ಯವನ್ನು ನುಡಿದಿದ್ದರು.ಮೇ-ಜೂನ್ ತಿಂಗಳಲ್ಲಿ ಕೊರೊನಾ ಕಮ್ಮಿಯಾಗುವ ಬದಲು, ಉಚ್ಚ್ರಾಯ ಸ್ಥಿತಿಗೆ ಹೋಗಿದ್ದಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದೆವು. ಆದರೂ, ಐದು ತಿಂಗಳ ಹಿಂದೆನೇ ಕೊರೊನಾಗೆ ಲಸಿಕೆ ಸಿಗುವುದು ಯಾವಾಗ ಎನ್ನುವುದರ ಬಗ್ಗೆ ಜ್ಯೋತಿಷ್ಯ ನುಡಿಯಲಾಗಿತ್ತು.ಗ್ರಹಗತಿ ಮತ್ತು ರಾಶಿಫಲಕ್ಕೆ ಅನುಗುಣವಾಗಿ ಜುಲೈ ತಿಂಗಳಲ್ಲಿ ನೀರಜ್ ಧಾಂಕೇರ್ ಎನ್ನುವ ಜ್ಯೋತಿಷಿ ಭವಿಷ್ಯ ನುಡಿದಿದ್ದರು. ತಮ್ಮ ಭವಿಷ್ಯದಲ್ಲಿ ಕೊರೊನಾ ವೈರಸಿನ ಪ್ರಬಾವ ಕಮ್ಮಿಯಾಗುವುದು ಯಾವಾಗ, ಲಸಿಕೆ ಸಿಗುವುದು ಯಾವಾಗ ಎನ್ನುವುದರ ಬಗ್ಗೆಯೂ ತಿಳಿಸಿದ್ದರು.ಆಂಧ್ರಪ್ರದೇಶ ಮೂಲದ ಖ್ಯಾತ ಜ್ಯೋತಿಷಿ ಕೆ.ಎನ್.ಆರ್.ರಾವ್ ಗರಡಿಯಲ್ಲಿ ಪಳಗಿರುವ ನೀರಜ್ ಧಾಂಕೇರ್ , ಕೊರೊನಾ ವೈರಸ್ ನಿಂದ ಯಾವ ರೀತಿ ದೇಶಕ್ಕೆ ತೊಂದರೆಯಾಗಲಿದೆ ಎನ್ನುವುದನ್ನು ಹಂತ ಹಂತವಾಗಿ ವಿವರಿಸಿದ್ದು ಹೀಗೆ:"ಶನಿ, ಕೇತು ಮತ್ತು ಗುರು ಗ್ರಹಗಳು ಕೇತುವಿನಲ್ಲಿ ಇರುವುದರಿಂದ, ನವೆಂಬರ್ 5, 2019ಕ್ಕೆ ಕೊರೊನಾ ಎನ್ನುವ ವೈರಾಣು ಹುಟ್ಟಿತು.
ಡಿಸೆಂಬರ್ 26, 2019ರಂದು ಇವೆಲ್ಲಾ ಗ್ರಹಗಳ ಜೊತೆ, ರವಿ, ಚಂದ್ರ ಮತ್ತು ಬುಧ ಗ್ರಹಗಳು ಧನು ರಾಶಿಗೆ ಪ್ರವೇಶಿಸಿದ್ದರಿಂದ, ಕೊರೊನಾ ವಿಶ್ವಕ್ಕೆ ಪಸರಿಸಲಾರಂಭಿಸಿತು" ಜ್ಯೋತಿಷಿ ನೀರಜ್."ಶನಿ, ಕೇತು ಮತ್ತು ಗುರು ಗ್ರಹಗಳು ಕೇತುವಿನಲ್ಲಿ ಇರುವುದರಿಂದ, ನವೆಂಬರ್ 5, 2019ಕ್ಕೆ ಕೊರೊನಾ ಎನ್ನುವ ವೈರಾಣು ಹುಟ್ಟಿತು. ಡಿಸೆಂಬರ್ 26, 2019ರಂದು ಇವೆಲ್ಲಾ ಗ್ರಹಗಳ ಜೊತೆ, ರವಿ, ಚಂದ್ರ ಮತ್ತು ಬುಧ ಗ್ರಹಗಳು ಧನು ರಾಶಿಗೆ ಪ್ರವೇಶಿಸಿದ್ದರಿಂದ, ಕೊರೊನಾ ವಿಶ್ವಕ್ಕೆ ಪಸರಿಸಲಾರಂಭಿಸಿತು" ಜ್ಯೋತಿಷಿ ನೀರಜ್.ಮೇ ಒಂದಕ್ಕೆ ಶನಿ, ಗುರು ಮತ್ತು ಕುಜ ರಾಶಿಯು ಮಕರಕ್ಕೆ ಪ್ರವೇಶಿಸಿದ್ದರಿಂದ ಸ್ವಲ್ಪ ಮಟ್ಟಿನ ನಿರಾಳತೆ. ಆದರೆ, ಜೂನ್ 30ಕ್ಕೆ, ಗುರು ಮತ್ತು ಕೇತು, ಧನು ರಾಶಿಯಲ್ಲಿರುವುದರಿಂದ, ವೈರಸ್ ಹೊಸ ರೂಪವನ್ನು ಪಡೆಯುತ್ತದೆ. ಆಗಸ್ಟ್ ಐದಕ್ಕೆ, ಎರಡೂ ಗ್ರಹಗಳು, ಅದೇ ರಾಶಿಯಲ್ಲಿ ಮುಂದುವರಿಯುವುದರಿಂದ, ವೈರಸ್ ಪ್ರಭಾವ ಹಾಗೇ ಉಳಿಯುತ್ತದೆ.ಸೆಪ್ಟಂಬರ್ 25, 2020ಕ್ಕೆ ಕೇತು, ವೃಶ್ಚಿಕ ರಾಶಿಗೆ ಪ್ರವೇಶಿಸಿದ ನಂತರ, ಕೊರೊನಾ ವೈರಸ್ ಗೆ ಲಸಿಕೆ ಹೊರಬರುವ ಸುದ್ದಿ ಬರಲಾರಂಭಿಸಿದೆ.
ನವೆಂಬರ್ 20, 2020ರ ನಂತರ ಲಸಿಕೆ ಬರುವ ವಿಚಾರ ಅಧಿಕೃತವಾಗುತ್ತದೆ. ಬಹುತೇಕ ಕಾರ್ತಿಕ ಮಾಸದ ಅಂತ್ಯಕ್ಕೆ ಕೊರೊನಾ ವೈರಸ್ ಕಾಟದಿಂದ ಜಗತ್ತು ನಿಧಾನವಾಗಿ ನಿರಾಳವಾಗಲಾರಂಭಿಸುತ್ತದೆ" ಎಂದು ಜ್ಯೋತಿಷಿ ನೀರಜ್ ಧಾಂಕೇರ್ ನುಡಿದಿದ್ದರು."ಕೃಷಿ ಚಟುವಟಿಕೆಗಳು ಬಂದ್ ಆದರೆ, ಇದರಿಂದ ತುಂಬಾ ದೊಡ್ಡ ಆಪತ್ತು ಎದುರಿಸಬೇಕಾಗುತ್ತದೆ. ಮನುಷ್ಯನ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕಿದೆ. ಇದಕ್ಕೆ ಮನುಷ್ಯ ಅರಶಿಣ ಮತ್ತು ಅಮೃತವಳ್ಳಿ ಮುಂತಾದವುದನ್ನು ಹೆಚ್ಚಾಗಿ ಸೇವಿಸಬೇಕು.
ಜೂನ್ ಮಾಸಾಂತ್ಯದಿಂದ ಕೊರೊನಾ ವೈರಸ್ ಪ್ರಭಾವ ಕಮ್ಮಿಯಾಗುತ್ತಾ ಸಾಗುತ್ತದೆ" ಎನ್ನುವ ಹೊಸ ದಿನಾಂಕವನ್ನು ಅಭಿಗ್ಯಾ ಆನಂದ್ ಎನ್ನುವ ಬಾಲ ಜ್ಯೋತಿಷಿ ನೀಡಿದ್ದ.