Dailyhunt Logo
  • Light mode
    Follow system
    Dark mode
    • Play Story
    • App Story
ದಾರಿಬದಿಯಲ್ಲಿ ಅಡ್ಡಗಟ್ಟಿದ ವೃದ್ಧ ಮಹಿಳೆಯರಿಗೆ ಸ್ಪಂದಿಸಿದ ಹೆಚ್ ಡಿ ಕುಮಾರಸ್ವಾಮಿ

ದಾರಿಬದಿಯಲ್ಲಿ ಅಡ್ಡಗಟ್ಟಿದ ವೃದ್ಧ ಮಹಿಳೆಯರಿಗೆ ಸ್ಪಂದಿಸಿದ ಹೆಚ್ ಡಿ ಕುಮಾರಸ್ವಾಮಿ

ಮಂಡ್ಯ: ಆರು ತಿಂಗಳು ಸರ್ಕಾರ ಇದ್ದಿದ್ರೆ ನಿಮ್ಮೂರ ರಸ್ತೆ ಕಾಮಗಾರಿ ಮುಗಿದು ಹೋಗ್ತಿತ್ತು. ನಾನು ಶ್ರೀಮಂತರ ಪರ ಅಲ್ಲ, ಬಡವರ ಪರ ಇರುವವನು ಎಂದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ.

ನಾಗಮಂಗಲ ತಾಲೂಕಿನ ಕಲ್ಲುದೇವನಹಳ್ಳಿಗೆ ಭಾನುವಾರ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿದ್ದರು. ಆ ವೇಳೆ ರಸ್ತೆಯಲ್ಲೇ ಅಡ್ಡಗಟ್ಟಿದ ಗ್ರಾಮದ ಮೂವರು ಮಹಿಳೆಯರು, ಕೆಲ ಬೇಡಿಕೆಗಳನ್ನು ಎಚ್​ಡಿಕೆ ಬಳಿ ಇಟ್ಟರು. ಆ ಸಂದರ್ಭದಲ್ಲಿ ಅವರೊಂದಿಗೆ ಮಾತನಾಡಿದ ಎಚ್​ಡಿಕೆ ನಾನು ಶ್ರೀಮಂತರ ಪರ ಅಲ್ಲ ಬಡವರ ಪರ ಎಂದು ಹೇಳಿದರು.

ನಂತರ ಅವರ ಬೇಡಿಕೆಗಳಿಗೆ ಸ್ಪಂದಿಸಿದ ಕುಮಾರಸ್ವಾಮಿ, , ನಮ್ಮೂರಿಗೆ ರಸ್ತೆ ಮಾಡಿಸಿಕೊಂಡಿ' ಎಂದು ಮತ್ತೆ ಆ ಮಹಿಳೆಯರು ಕೈಮುಗಿದು ಮನವಿ ಮಾಡಿದರು. 'ಆಯ್ತು, ರಸ್ತೆ ಮಾಡಿಸಿಕೊಡುವೆ' ಎಂದು ಪ್ರತಿಕ್ರಿಯಿಸುತ್ತಿದ್ದಂತೆ ವೃದ್ಧೆಯೊಬ್ಬರು, 'ನನ್ನ ಮನೆ ಮಳೆ ಬಂದ್ರೆ ಸೋರ್ತಿದೆ, ಸಹಾಯ ಮಾಡಿ' ಎನ್ನುತ ಕೈ ಮುಗಿದರು.

ಆಯ್ತು ಮಾಡೋಣ ಎಂದ ಎಚ್​ಡಿಕೆ ಮುಂದೆ ಸಾಗಿದರು.

Dailyhunt
Disclaimer: This content has not been generated, created or edited by Dailyhunt. Publisher: News Kannada