Dailyhunt Logo
  • Light mode
    Follow system
    Dark mode
    • Play Story
    • App Story
ದ್ರಾಕ್ಷಿ ಹಣ್ಣು ತಿನ್ನುವುದರಿಂದ ಆರೋಗ್ಯ ಲಾಭಗಳು!

ದ್ರಾಕ್ಷಿ ಹಣ್ಣು ತಿನ್ನುವುದರಿಂದ ಆರೋಗ್ಯ ಲಾಭಗಳು!

ದ್ರಾಕ್ಷಿ ಹಣ್ಣು ಸಣ್ಣದಾದರೂ ಪೌಷ್ಟಿಕಾಂಶಗಳಿಂದ ತುಂಬಿರುವ ಹಣ್ಣು. ಇದು ಸಿಹಿಹುಳಿ ರುಚಿ, ರಸದ ಗುಣ ಮತ್ತು ಆರೋಗ್ಯ ಲಾಭಗಳಿಂದ ಎಲ್ಲ ವಯಸ್ಸಿನವರಿಗೂ ಇಷ್ಟವಾಗುವ ಹಣ್ಣು. ವಿಶೇಷವಾಗಿ ಬೇಸಿಗೆಯಲ್ಲಿ ದೇಹಕ್ಕೆ ತಾಜಾತನ ನೀಡಲು ದ್ರಾಕ್ಷಿ ಬಹಳ ಉಪಯುಕ್ತ.

ದ್ರಾಕ್ಷಿಯಲ್ಲಿ ಆಂಟಿಆಕ್ಸಿಡೆಂಟ್ಸ್, ವಿಟಮಿನ್‌ಗಳು ಮತ್ತು ಖನಿಜಗಳು ಹೆಚ್ಚು ಇರುವುದರಿಂದ ಇದು ದೇಹದ ಹಲವಾರು ಭಾಗಗಳಿಗೆ ಲಾಭಕರವಾಗಿದೆ.

ದ್ರಾಕ್ಷಿ ಕಡಿಮೆ ಕ್ಯಾಲೊರಿ ಹೊಂದಿದ್ದು, ಹೆಚ್ಚಿನ ಪೌಷ್ಟಿಕ ಮೌಲ್ಯ ಹೊಂದಿದೆ.

ಇದರಲ್ಲಿ ವಿಟಮಿನ್ C, ವಿಟಮಿನ್ K, ಪೊಟ್ಯಾಸಿಯಮ್, ಫೈಬರ್, ಆಂಟಿಆಕ್ಸಿಡೆಂಟ್ಸ್ (ರೆಸ್ವೆರಾಟ್ರಾಲ್), ಸಹಜ ಸಕ್ಕರೆ, ನೀರಿನ ಪ್ರಮಾಣ ಹೆಚ್ಚು ಇಷ್ಟೆಲ್ಲಾ ಪೋಷಕಾಂಶಗಳು ದೊರೆಯುತ್ತದೆ. ಇವು ದೇಹಕ್ಕೆ ಶಕ್ತಿ ಮತ್ತು ರಕ್ಷಣೆಯನ್ನು ನೀಡುತ್ತವೆ.

ದ್ರಾಕ್ಷಿಯಲ್ಲಿ ಇರುವ ರೆಸ್ವೆರಾಟ್ರೋಲ್ ಹೃದಯದ ರಕ್ತನಾಳಗಳನ್ನು ರಕ್ಷಿಸುತ್ತದೆ. ರಕ್ತ ಸಂಚಾರ ಸುಧಾರಣೆ, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿ, ಹೃದಯರೋಗದ ಅಪಾಯ ಕಡಿಮೆ, 2️ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ವಿಟಮಿನ್ C ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ದ್ರಾಕ್ಷಿಯಲ್ಲಿ ಫೈಬರ್ ಇರುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆ ಮಾಡುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: News Kannada