ಮೈಸೂರು : ಈ ಬಾರಿ ಮೈಸೂರು ದಸರಾದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್‌ಗಳ ಕಳೆ ಕಾಣಲಿದ್ದು, ದಸರಾಕ್ಕೆ ಬೆಳ್ಳಿ ಪರದೆಯ ಮೆರುಗು ಬರಲಿದೆ. ಜಂಬೂಸವಾರಿಯಲ್ಲಿ ಧುಮುಕಲಿದ್ದಾರೆ ಸ್ಯಾಂಡಲ್‌ವುಡ್ ಸ್ಟಾರ್ಸ್ಗಳು. ದಸರಾ ಮೆರವಣಿಗೆಯಲ್ಲಿ ಕನ್ನಡದ 30 ಸ್ಟಾರ್‌ಗಳು ಭಾಗಿಯಾಗಲಿದ್ದಾರೆ.
ಅರಮನೆಯಿಂದ ಕೆ.ಆರ್. ಸರ್ಕಲ್‌ವರೆಗೆ ತಾರೆಯರ ಮೆರವಣಿಗೆ ನಡೆಯಲಿದೆ. ತೆರೆದ ಅಂಬಾರಿ ಬಸ್‌ನಲ್ಲಿ ಸ್ಟಾರ್‌ಗಳು ಸಾಗಲಿದ್ದಾರೆ. ಕ್ರೇಜಿ಼ ಸ್ಟಾರ್ ರವಿಚಂದ್ರನ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಯಶ್, ರಿಷಬ್‌ಶೆಟ್ಟಿ, ರಕ್ಷಿತ್ ಶೆಟ್ಟಿ, ರಚಿತಾ ರಾಮ್, ರುಕ್ಮಿಣಿ ವಸಂತ್, ಉಮಾಶ್ರೀಗೆ ಆಹ್ವಾನ ನೀಡಲಾಗಿದೆ.
ಜಂಬೂಸವಾರಿಗೆ ಸ್ಯಾಂಡಲ್‌ವುಡ್ ಸ್ಟಾರ್‌ಗಳು ಸಾಥ್ ನೀಡಲಿದ್ದಾರೆ. ಕಂಬಳದ ಜೊತೆಗೆ ಸ್ಯಾಂಡಲ್‌ವುಡ್ ತಾರೆಯರನ್ನೂ ಭಾಗಿಯಾಗಿಸಲು ಸಿಎಂ ಸೂಚನೆ ನೀಡಿದ್ದಾರೆ. ಜನದಟ್ಟಣೆ ನಿಯಂತ್ರಣಕ್ಕೆ ತಾರೆಯರ ಮೆರವಣಿಗೆ ಕೆ.ಆರ್. ಸರ್ಕಲ್‌ವರೆಗೆ ಮಾತ್ರ ತಾರೆಯರಿಗೆ ಸೆಕ್ಯುರಿಟಿ ವ್ಯವಸ್ಥೆ ಇರಲಿದೆ.
ಈ ಬಾರಿ ದಸರಾದಲ್ಲಿ 93 ವರ್ಷಗಳ ಸ್ಯಾಂಡಲ್‌ವುಡ್ ಇತಿಹಾಸದ ಸ್ತಬ್ಧಚಿತ್ರ ಇರಲಿದೆ. 93 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸ ಸಾರುವ ವಿಶೇಷ ಸ್ತಬ್ಧಚಿತ್ರವಾಗಿದ್ದು, 1934ರ ಕಪ್ಪು ಬಿಳುಪು ಯುಗದಿಂದ ಮಲ್ಟಿಪ್ಲೆಕ್ಸ್‌ವರೆಗಿನ ಚಿತ್ರರಂಗದ ಪಯಣ ಅನಾವರಣಗೊಳ್ಳಲಿದೆ. ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಪುನೀತ್ ರಾಜ್‌ಕುಮಾರ್ ಸ್ಮರಣೆಗೆ ವಿಶೇಷ ಸ್ತಬ್ಧಚಿತ್ರ ಇರಲಿದೆ. ದಸರಾ ಮೆರವಣಿಗೆಯಲ್ಲಿ ಕನ್ನಡ ಚಿತ್ರರಂಗದ ಇತಿಹಾಸ ಕಂಗೊಳಿಸಲಿದೆ.

