Dailyhunt Logo
  • Light mode
    Follow system
    Dark mode
    • Play Story
    • App Story
ಗದಗ: ಬೀದಿ ನಾಯಿ ದಾಳಿ, ಮಗುವಿನ ತಲೆಗೆ ಗಂಭೀರ ಗಾಯ!

ಗದಗ: ಬೀದಿ ನಾಯಿ ದಾಳಿ, ಮಗುವಿನ ತಲೆಗೆ ಗಂಭೀರ ಗಾಯ!

ದಗ: ಬೀದಿ ನಾಯಿ ದಾಳಿ ನಡೆಸಿ ಮಗುವಿನ ತಲೆಗೆ ಗಂಭೀರ ಗಾಯವಾಗಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಡಣದ ವಾರ್ಡ ನಂ. 5ರ ಮಕಾನ ಓಣಿಯಲ್ಲಿ ನಡೆದಿದೆ.

ಎರಡೂವರೆ ವರ್ಷದ ರಾಹಾ ಗಾಡಿವಾಲೆ ಬೀದಿ ನಾಯಿ ದಾಳಿಗೆ ಒಳಗಾದ ಮಗು. ಚಿಪ್ಸ್ ತರಲು ಅಂಗಡಿಗೆ ತೆರಳುತ್ತಿದ್ದ ವೇಳೆ ಏಕಾಏಕಿ ಮಗುವಿನ ಮೇಲೆ ಬೀದಿ ನಾಯಿ ಎರಗಿದೆ.

ಮಗುವಿನ ತಲೆಗೆ ಕಚ್ಚಿ ಗಂಭೀರ ಗಾಯಗೊಳಿಸಿದೆ.

ತಕ್ಷಣ ಸ್ಥಳೀಯರಿಂದ ಮಗುವನ್ನು ರಕ್ಷಣೆ ಮಾಡಲಾಗಿದೆ. ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಇದೇ ರೀತಿ ಮಗುವೊಂದರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದವು. ಲಕ್ಷ್ಮೇಶ್ವರ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ.

ಪುರಸಭೆಗೆ ಅನೇಕ ಬಾರಿ ಮನವಿ ಮಾಡಿದ್ರೂ ಅಧಿಕಾರಿಗಳು ಕ್ರಮ ಕೈಗೊಳ್ಳಲಿಲ್ಲ. ಪುರಸಭೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Dailyhunt
Disclaimer: This content has not been generated, created or edited by Dailyhunt. Publisher: News Kannada