ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿಯ 'ಎಕ್ಸ್' ಖಾತೆ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿ ದೆಹಲಿ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
'ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ ಸಂದರ್ಭದಲ್ಲಿ ಸಿಜೆಪಿ ಪಕ್ಷದ 'ಎಕ್ಸ್' ಖಾತೆಯಲ್ಲಿ ಮಾಡುತ್ತಿದ್ದ ಪೋಸ್ಟ್‌ಗಳು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಉಂಟುಮಾಡಬಹುದು ಎಂಬ ಕಾರಣ ನೀಡಿ ಸರ್ಕಾರ ಖಾತೆಯನ್ನು ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡಿತ್ತು' ಎಂದು ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.
ಸಿಜೆಪಿಯ 'ಎಕ್ಸ್' ಖಾತೆ ಮೇಲೆ ವಿಧಿಸಿರುವ ನಿರ್ಬಂಧವನ್ನು ತೆಗೆದು ಹಾಕುವ ಕುರಿತಂತೆ ಮಾಹಿತಿ ತಂತ್ರಜ್ಞಾನ ನಿಯಮಗಳಡಿ ರಚಿಸಿದ ಪರಿಶೀಲನಾ ಸಮಿತಿಯು ಪರಾಮರ್ಶೆ ನಡೆಸಿ, ಜುಲೈ 7ರ ಒಳಗಾಗಿ ನಿರ್ಧಾರ ಪ್ರಕಟಿಸಬೇಕು' ಎಂದು ಹೈಕೋರ್ಟ್ ಮೇ 29ರಂದು ಸೂಚಿಸಿತ್ತು.

