Sunday, 01 Nov, 2.53 pm ನ್ಯೂಸ್ ಕನ್ನಡ

ಹೋಂ
ಕಾಸರಗೋಡು ಜಿಲ್ಲಾ ಸೈಬರ್ ಕ್ರೈಂ ಠಾಣೆಗೆ ಸಿಎಂ ಪಿಣರಾಯಿ ಚಾಲನೆ

ಕಾಸರಗೋಡು : ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು.

ಸೈಬರ್ ಅಪರಾಧಗಳಿಗೆ ಶಿಕ್ಷೆ ಖಾತರಿಪಡಿಸಲು ಪೊಲೀಸ್ ಕಾಯ್ದೆಯಲ್ಲಿ ಬದಲಾವಣೆ ತರಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು .

ಸಾಮಾಜಿಕ ಜಾಲ ತಾಣಗಳ ಮೂಲಕ ಮಕ್ಕಳು , ಮಹಿಳೆಯರ ಮೇಲೆ ಅವಹೇಳನ ಗಳು ಹೆಚ್ಚುತ್ತಿವೆ . ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುವುದು . ಸಾಮಾಜಿಕ ಜಾಲ ತಾಣಗಳ ದುರುಪಯೋಗ ವನ್ನು ತಡೆಗಟ್ಟುವುದು ಅನಿವಾರ್ಯ ಎಂದು ಹೇಳಿದರು .

ರಾಜ್ಯ ಪೊಲೀಸ್ ಮಹಾನಿರ್ದೇಶಕ ಲೋಕನಾಥ ಬೆಹ್ರಾ , ಎ ಡಿ ಜಿ ಪಿ ಮನೋಜ್ ಅಬ್ರಹಾಂ, ಡಾ. ಶೇಕ್ ದರ್ವೇಶ್ ಸಾಹೇಬ್ , ಪಿ . ವಿಜಯನ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ . ಶಿಲ್ಪಾ , ಎ ಎಸ್ ಪಿ ಕ್ಷೇವಿಯರ್ ಸೆಬಾಸ್ಟಿಯನ್ , ಸ್ಪೆಷಲ್ ಬ್ರಾಂಚ್ ಡಿ ವೈ ಎಸ್ ಪಿ ಹರೀಶ್ಚ೦ದ್ರ ನಾಯ್ಕ್ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News Kannada
Top