Dailyhunt
ಕಣ್ಣೀರು ಹಾಕುತ್ತಾ ಬಾರ್ಸಿಲೋನಾ ಎಫ್‌ಸಿ ತಂಡ ತೊರೆದ ಲಯೊನೆಲ್ ಮೆಸ್ಸಿ

ಕಣ್ಣೀರು ಹಾಕುತ್ತಾ ಬಾರ್ಸಿಲೋನಾ ಎಫ್‌ಸಿ ತಂಡ ತೊರೆದ ಲಯೊನೆಲ್ ಮೆಸ್ಸಿ

ಬಾರ್ಸಿಲೋನಾ: ಅರ್ಜೆಂಟೀನಾದ ಖ್ಯಾತ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಅವರು ಕಣ್ಣೀರಿಡುತ್ತಾ ಬಾರ್ಸಿಲೋನಾ ಎಫ್‌ಸಿ ತಂಡ ತೊರೆಯುವುದಾಗಿ ಪ್ರಕಟಿಸಿದ್ದಾರೆ.

ಲಯೊನೆಲ್ ಮೆಸ್ಸಿ, ಬಾರ್ಸಿಲೋನಾ ತಂಡವನ್ನು ತೊರೆದಿರುವುದು ಕೋಟ್ಯಂತರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.

ಬಾರ್ಸಿಲೋನಾ ಯಶಸ್ಸಿನಲ್ಲಿ ಮಹತ್ತರ ಪಾತ್ರವನ್ನು ಮೆಸ್ಸಿ ವಹಿಸಿದ್ದರು. ನಾನು ಅತೀವ ವಿನಯ ಹಾಗೂ ಗೌರವದಿಂದ ವರ್ತಿಸಲು ಪ್ರಯತ್ನಿಸಿದ್ದೇನೆ. ಬಾರ್ಸಿಲೋನಾ ತಂಡವನ್ನು ತೊರೆಯುವಾಗ ಇದೊಂದೇ ನನ್ನ ಬಳಿ ಉಳಿಯುತ್ತದೆ ಎಂದು ಹೇಳಿದ್ದಾರೆ.

34 ವರ್ಷದ ಮೆಸ್ಸಿ, ಕಳೆದ 21 ವರ್ಷಗಳಲ್ಲಿ ಬಾರ್ಸಿಲೋನಾ ತಂಡದ ಭಾಗವಾಗಿದ್ದು, ದಾಖಲೆಯ 682 ಗೋಲುಗಳನ್ನು ಗಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: News Kannada