Dailyhunt
ಕರೋನಾ ಪರಿಹಾರಕ್ಕೆ ಅರ್ಜಿ ಅಹ್ವಾನಿಸಿದ ಬಿಬಿಎಂಪಿ

ಕರೋನಾ ಪರಿಹಾರಕ್ಕೆ ಅರ್ಜಿ ಅಹ್ವಾನಿಸಿದ ಬಿಬಿಎಂಪಿ

ಆಯಾ ವಾರ್ಡ್‌ನ ಕಂದಾಯ ಅಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಕೋವಿಡ್ ದೃಢಪಟ್ಟ ವರದಿ, ಕೋವಿಡ್‌ ರೋಗಿ ಸಂಖ್ಯೆ (ಬಿ.ಯು), ಮರಣ ಪ್ರಮಾಣಪತ್ರ, ಮೃತ ವ್ಯಕ್ತಿಯ ಆಧಾರ್ ಕಾರ್ಡ್‌, ಬಿಪಿಎಲ್‌ ಪಡಿತರ ಚೀಟಿ, ಅರ್ಜಿದಾರರ ಆಧಾರ್ ಕಾರ್ಡ್‌, ಬ್ಯಾಂಕ್ ಖಾತಾ ಪುಸ್ತಕದ ಪ್ರತಿ, ಸ್ವಯಂ ಘೋಷಣಾ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

ಮೃತ ವ್ಯಕ್ತಿಯ ಪತಿ ಅಥವಾ ಪತ್ನಿ ಹೊರತುಪಡಿಸಿ ಕುಟುಂಬದ ಇತರೆ ಸದಸ್ಯರು ಅರ್ಜಿ ಸಲ್ಲಿಸಿದಲ್ಲಿ ಕುಟುಂಬದ ಉಳಿದ ಸದಸ್ಯರಿಂದ ನಿರಾಕ್ಷೇಪಣಾ ಪತ್ರ(ಫಾರಂ -3) ಸಲ್ಲಿಸಬೇಕು ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: News Kannada