Dailyhunt Logo
  • Light mode
    Follow system
    Dark mode
    • Play Story
    • App Story
ಕೆಂಪು ಸಮುದ್ರದಲ್ಲಿ ಭಾರತೀಯ ಹಡಗಿನ ಮೇಲೆ ದಾಳಿ!

ಕೆಂಪು ಸಮುದ್ರದಲ್ಲಿ ಭಾರತೀಯ ಹಡಗಿನ ಮೇಲೆ ದಾಳಿ!

ಯೆಮನ್‌: ಯೆಮನ್‌ನ ಪಶ್ಚಿಮ ಕರಾವಳಿ ಸಮೀಪದ ಕೆಂಪು ಸಮುದ್ರದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಹಡಗಿನ ಮೇಲೆ ದಾಳಿಯಾಗಿದೆ. ಸ್ಫೋಟಕಗಳಿಂದ ತುಂಬಿದ ದೋಣಿಯೊಂದು ಭಾರತೀಯ ಹಡಗಿಗೆ ಡಿಕ್ಕಿ ಹೊಡೆದ ಪರಿಣಾಮ ಹಡಗು ಮುಳುಗಿರುವ ಘಟನೆ ನಡೆದಿದೆ.

ಈ ದಾಳಿಯಲ್ಲಿ ಹಡಗಿನಲ್ಲಿದ್ದ 13 ಭಾರತೀಯರು ಸೇರಿದಂತೆ ಒಟ್ಟು 14 ಸಿಬ್ಬಂದಿಯನ್ನ ಯೆಮನ್ ನೌಕಾಪಡೆ ಹಾಗೂ ಕರಾವಳಿ ರಕ್ಷಣಾ ಪಡೆ ಜಂಟಿ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಿದೆ.

ಈ ದಾಳಿಯ ಹೊಣೆಯನ್ನ ಇದುವರೆಗೆ ಯಾವುದೇ ಸಂಘಟನೆ ಹೊತ್ತಿಲ್ಲ. ಕೆಂಪು ಸಮುದ್ರದಲ್ಲಿ ಭಾರತೀಯ ಹಡಗಿನ ಮೇಲೆ ನಡೆದ ಮೊದಲ ದಾಳಿ ಇದಾಗಿದೆ ಎಂದು ವರದಿಯಾಗಿದೆ.

ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ಈ ಬಗ್ಗೆ ಪ್ರತಿಕ್ರಿಯಿಸಿ, ಭಾರತೀಯ ಹಡಗಿನ ಮೇಲಿನ ದಾಳಿಯನ್ನ ಅಪ್ರಚೋದಿತ ಮತ್ತು ಅಮಾನವೀಯ ದಾಳಿ ಎಂದು ಕರೆದಿದ್ದರೆ.

ಭಾರತೀಯ ಮೆಕನೈಸ್ಡ್ ಸೇಲಿಂಗ್ ವೆಸೆಲ್ (MSV) 'ಫೈಜ್ ನೂರ್ ಓಲಿಯಾ' ಯೆಮನ್ ಸಮುದ್ರ ಪ್ರದೇಶದ ಬಳಿ ಪ್ರಕ್ಷೇಪಕದ ದಾಳಿಗೆ ಒಳಗಾಗಿ, ಹಡಗು ಮಗುಚಿ ಮುಳುಗಿದೆ. ಶಸ್ತ್ರಾಸ್ತ್ರವಿಲ್ಲದ ಈ ಹಡಗಿನ ಮೇಲಿನ ದಾಳಿಯನ್ನ ಭಾರತ ತೀವ್ರವಾಗಿ ಖಂಡಿಸುತ್ತದೆ ಎಂದು ಎಕ್ಸ್‌ ಪೋಸ್ಟ್‌ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: News Kannada