Dailyhunt
ಕೋವಿಡ್ ಲಸಿಕೆ ವಿತರಣೆಗೆ ಡ್ರೋನ್ ಬಳಸಲು ಷರತ್ತುಬದ್ಧ ಅನುಮತಿ

ಕೋವಿಡ್ ಲಸಿಕೆ ವಿತರಣೆಗೆ ಡ್ರೋನ್ ಬಳಸಲು ಷರತ್ತುಬದ್ಧ ಅನುಮತಿ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಮಣಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿ ಕೋವಿಡ್ ಲಸಿಕೆ ವಿಸ್ತರಿಸಲು ಡ್ರೋನ್‌ಗಳನ್ನು ಬಳಸಲು ಅನುಮತಿ ದೊರೆತಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ.

ಲಸಿಕೆಗಳನ್ನು 3 ಸಾವಿರ ಮೀಟರ್‌ನಷ್ಟು ಎತ್ತರದವರೆಗೆ ಡ್ರೋನ್ ಬಳಸಬಹುದಾಗಿದೆ. ಐಐಟಿ ಮತ್ತು ಐಸಿಎಂಆರ್ - ಎರಡೂ ಸಂಸ್ಥೆಗಳಿಗೆ 2021ರ ಡ್ರೋನ್ ನಿಯಮಗಳ ಅಡಿಯಲ್ಲಿ ಷರತ್ತುಬದ್ಧ ವಿನಾಯಿತಿಯನ್ನು ನೀಡಲಾಗಿದೆ. ಆಗಸ್ಟ್ 25ರಂದು ಸಚಿವಾಲಯವು ಡ್ರೋನ್ ನಿಯಮಗಳನ್ನು ಸೂಚಿಸಿತು. ಅದು ಡ್ರೋನ್‌ಗಳ ಮೇಲೆ ನಿಯಂತ್ರಕ ಆಡಳಿತವನ್ನು ಉದಾರಗೊಳಿಸಿತು.

Dailyhunt
Disclaimer: This content has not been generated, created or edited by Dailyhunt. Publisher: News Kannada