ಮೈಸೂರು: ಕುಡಿದ ಮತ್ತಿನಲ್ಲಿ ಪತಿ-ಪತ್ನಿ ಜಗಳ ನಡೆದು, ದಿಕ್ಕು ತಪ್ಪಿಸಲು ಹೋದ ಮಹಿಳೆಗೆ ಪೊಲೀಸರು ಬುದ್ಧಿ ಹೇಳಿದ ಘಟನೆ ಎಚ್.ಡಿ.ಕೋಟೆ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಬಂಕಹಳ್ಳಿ ಗ್ರಾಮದ ಗೋಪಮ್ಮ ಅಲಿಯಾಸ್ ಗೌರಮ್ಮ(52) ಹಾಗೂ ಪತಿ ಚೆಲುವ ಕುಡಿದ ಮತ್ತಿನಲ್ಲಿ ಸೋಮವಾರ ರಾತ್ರಿ ಜಗಳ ಮಾಡಿದ್ದಾರೆ.
ಇದರಿಂದ ಕೋಪಗೊಂಡ ಪತಿ, ಪತ್ನಿ ಗೌರಮ್ಮರಿಗೆ ಮುಖಕ್ಕೆ ಜೋರಾಗಿ ಹೊಡೆದ ಪರಿಣಾಮ ಗಾಯಗೊಂಡಿದ್ದಾರೆ.
ನಂತರ ರಾತ್ರಿ ಹೆಡಿಯಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಎಚ್.ಡಿ.ಕೋಟೆ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಮಹಿಳೆ ಗುಣಮುಖರಾಗುತ್ತಿದ್ದಾರೆ.
ಕಥೆಕಟ್ಟಿದ ಮಹಿಳೆ: ಕುಡಿದ ಮತ್ತಿನಲ್ಲಿ ಪತಿ-ಪತ್ನಿ ಜಗಳ ನಡೆದಿದೆ.ಆದರೆ,ಜಮೀನಿಗೆ ಕೆಲಸಕ್ಕೆ ಬಂದಿಲ್ಲವೆಂದು ಹಲ್ಲೆ ಮಾಡಲಾಗಿದೆ ಎಂದು ಪೊಲೀಸರು ಮುಂದೆ ಗೌರಮ್ಮ ಹೇಳಿದ್ದಾರೆ.
ಪೊಲೀಸರು ವಿಚಾರಣೆ ಮಾಡಿದಾಗ, ಕುಡಿದ ಮತ್ತಿ ಇಬ್ಬರ ಜಗಳ ನಡೆದು, ಪತಿ ಹಲ್ಲೆ ಮಾಡಿದ್ದಾನೆ ಎಂದು ಗೊತ್ತಾಗಿದೆ. ಪತ್ನಿ-ಪತಿ ಇಬ್ಬರಿಗೂ ಪೊಲೀಸರು ಬುದ್ಧಿ ಹೇಳಿ ರೀತಿ, ಸುಳ್ಳು ಹೇಳಬಾರದು ಎಂದು ತಿಳಿ ಹೇಳಿದ್ದಾರೆ.

