Dailyhunt Logo
  • Light mode
    Follow system
    Dark mode
    • Play Story
    • App Story
ಕುಪ್ಪೆಪದವಿನಲ್ಲಿ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ

ಕುಪ್ಪೆಪದವಿನಲ್ಲಿ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ

ಕುಪ್ಪೆಪದವು: ಇಮ್ಯಾಕುಲೇಟ್ ಹಾರ್ಟ್ ಆಫ್ ಮೇರಿ ಚರ್ಚ್ ಕಥೊಲಿಕ್ ಸಭಾ ಮಂಗಳೂರು ಪ್ರದೇಶ(ರಿ)ಕುಪ್ಪೆಪದವು ಘಟಕದ ಮುಂದಾಳತ್ವದಲ್ಲಿ ಲಯನ್ಸ್‌ ಕ್ಲಬ್ ಅಲಂಗಾರು, ಮರಿಯಗಿರಿ ಆರೋಗ್ಯ ಕೇಂದ್ರ ಕುಪ್ಪೆಪದವು, ಕೆ. ಎಮ್.ಸಿ ಆಸ್ಪತ್ರೆ ಮಂಗಳೂರು ಹಾಗೂ ಕುಪ್ಪೆಪದವು ನಾಗರಿಕರ ಸಹಕಾರದೊಂದಿಗೆ ನಿನ್ನೆ ಭಾನುವಾರ ರಕ್ತದಾನ ಶಿಬಿರವನ್ನು ಆಶಾಕಿರಣ ಸಭಾಭವನದಲ್ಲಿ ನಡೆಸಲಾಯಿತು.

79 ದಾನಿಗಳು ತಮ್ಮ ಅಮೂಲ್ಯ ರಕ್ತದಾನ ಮಾಡಿ ಕಾರ್ಯಕಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದಲ್ಲಿ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಫಾ। ಮಾರ್ಸೆಲ್ ಸಲ್ದಾನ್ಹ, ಅತಿಥಿ ಧರ್ಮಗುರುಗಳಾದ ಫಾ। ಆಲ್ಬನ್, ಕೆ.ಎಮ್.ಸಿ ಆಸ್ಪತ್ರೆಯ ವೈದ್ಯರಾದ ಡಾ। ರಾಜಶೇಖರ್ ಬ್ಲಡ್‌ಬ್ಯಾಂಕ್ ಸಿಬ್ಬಂದಿ ಶ್ರೀಮತಿ ಸೆಲಿನ್ ಡಿಸೋಜ,ದಿವಂಗತ ಲಾರೆನ್ಸ್ ಪಿಂಟೊ ಅವರ ತಂದೆ ಶ್ರೀ ರೊನಾಲ್ಡ್ ಪಿಂಟೊ, ಮಂಗಳೂರು ಮರೈನ್ ಕಾಲೇಜ್ ಹಾಸ್ಟೆಲ್ ವಾರ್ಡನ್ ಶ್ರೀ ವಸಂತ್ ಕಾಮತ್, ಕಥೊಲಿಕ್ ಸಭಾ ಮತ್ತು ಲಯನ್ಸ್‌ಕ್ಲಬ್‌ನ ಪಧಾಧಿಕಾರಿಗಳು ಹಾಜರಿದ್ದರು.

ಕಥೊಲಿಕ್‌ಸಭಾ ಅಧ್ಯಕ್ಷೆ ಶ್ರೀಮತಿ ಶರ್ಮಿಳಾ ಕುಟಿನ್ಹಾ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ಲವೀನಾ ಡಿಸೋಜ ವಂದನಾರ್ಪಣೆಗೈದರು.ಶ್ರೀ ಜೋಸೆಫ್ ಮೊರಾಸ್ ಕಾರ್ಯನಿರೂಪಣೆಗೈದರು.

Dailyhunt
Disclaimer: This content has not been generated, created or edited by Dailyhunt. Publisher: News Kannada