Dailyhunt
ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ರಿಜಬಾವ ವಿಧಿವಶ

ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ರಿಜಬಾವ ವಿಧಿವಶ

ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ರಿಜಬಾವ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ರಿಜಬಾವ ಸೋಮವಾರ (ಸೆಪ್ಟೆಂಬರ್ 13) ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.

ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯಿಂದ ನಟ ರಿಜಬಾವ ಬಳಲುತ್ತಿದ್ದರು.

ಕೆಲವು ದಿನಗಳ ಹಿಂದೆ ಅವರಿಗೆ ಸ್ಟ್ರೋಕ್ ಉಂಟಾಗಿತ್ತು ಎಂದು ಇಂಡಸ್ಟ್ರಿಯ ಮೂಲಗಳು ತಿಳಿಸಿವೆ. ಸ್ಟ್ರೋಕ್ ಉಂಟಾದ ಬಳಿಕ ನಟ ರಿಜಬಾವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಿಜಬಾವ ಕೊನೆಯುಸಿರೆಳೆದಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: News Kannada