Dailyhunt Logo
  • Light mode
    Follow system
    Dark mode
    • Play Story
    • App Story
ಮಂಗಳೂರಿನಲ್ಲಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ!

ಮಂಗಳೂರಿನಲ್ಲಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ!

ಮಂಗಳೂರು: ದ್ವಿಚಕ್ರ ವಾಹನದಲ್ಲಿ ಬಂದು ಏಕಾಏಕಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಘಟನೆ ಮಂಗಳೂರು ನಗರದ ಲಾಲ್ ಭಾಗ್ ಬಳಿ ನಡೆದಿದೆ.

ವಿಖ್ಯಾತ್ ಯಾನೆ ವಿಕ್ಕಿ ಬಪ್ಪಲ್ ಕೊಲೆ ಯತ್ನಕ್ಕೆ ಒಳಗಾದ ಯವಕ. ಬೆನ್ನಿನ ಹಿಂಭಾಗಕ್ಕೆ ದಾಳಿ ನಡೆಸಿ ಬೈಕ್ ನಲ್ಲಿ ಬಂದಿದ್ದ ಯುವಕ ಪರಾರಿಯಾಗಿದ್ದಾನೆ.

ಸದ್ಯ ಗಾಯಾಳುವಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜನನಿಬಿಡ ಜಾಗದಲ್ಲೇ ಒಬ್ಬಂಟಿಯಾಗಿ ಬಂದು ಅಪರಿಚಿತ ದಾಳಿ ನಡೆಸಿದ್ದಾನೆ. ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: News Kannada