Dailyhunt Logo
  • Light mode
    Follow system
    Dark mode
    • Play Story
    • App Story
ಮಂಗಳೂರು : ದ್ವಿಚಕ್ರವಾಹನ ಕಳವು ಪ್ರಕರಣ- ಆರೋಪಿ ಬಂಧನ

ಮಂಗಳೂರು : ದ್ವಿಚಕ್ರವಾಹನ ಕಳವು ಪ್ರಕರಣ- ಆರೋಪಿ ಬಂಧನ

ಮಂಗಳೂರು: ದ್ವಿಚಕ್ರವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಉಳ್ಳಾಲದ ಮಹಮ್ಮದ್‌ ಫೈಜಲ್‌ ಎಂದು ಗುರುತಿಸಲಾಗಿದೆ.

ನಗರದ ಉರ್ವಾ ಪೊಲೀಸ್‌ ರಾಣಾ ವ್ಯಾಪ್ತಿಯ ಕೋಡಿಕ್ಕಲ್‌ ಎಂಬಲ್ಲಿ ಮನೆಯ ಎದುರು ಪಾರ್ಕ್‌ ಮಾಡಿದ ದ್ವಿಚಕ್ರ ವಾಹನ ಕಳವು ಮಾಡಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜುಲೈ ೨೪ ರಂದು ಕೋಡಿಕ್ಕಲ್‌ ಎಂಬಲ್ಲಿ ಮನೆಯ ಎದುರು ಪಾರ್ಕ್‌ ಮಾಡಿದ್ದ KA-19-EB-2226 ನೋಂದಣಿಯ ಹೊಂಡಾ ಡಿಯೋ ಸ್ಕೂಟರ್‌ ಕಳವಾಗಿರುವ ಬಗ್ಗೆ ಊರ್ವಾ ಪೊಲೀಸ್‌ ರಾಣೆಯಲ್ಲಿ ದೂರು ದಾಖಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಆರೋಪಿಯ ಜಾಡು ಪತ್ತಹಚ್ಚಿ ಚಹರೆಯನ್ನು ಗುರುತಿಸಿ ಅಗಸ್ಟ್‌ ೧೮ ರಂದು ವಾಹನ ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಲಾಗಿದೆ.

ಈಗಾಗಲೇ ಆರೋಪಿ ವಿರುದ್ದ ಕರ್ನಾಟಕ , ಕೇರಳ ರಾಜ್ಯದ ವಿವಿಧ ಪೊಲೀಸ್‌ ರಾಣೆಗಳಲ್ಲಿ ೪೦ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ. ಅಲ್ಲದೇ ಆರೋಪಿ ವಿರುದ್ದ ಮಂಗಳೂರು ನಗರದ ಉತ್ತರ ಪೊಲೀಸ್‌ ರಾಣೆ, ಕೊಣಾಜೆ, ಉಳ್ಳಾಲ, ಮೂಡಬಿದ್ರೆ, ಬಂಟ್ವಾಳ, ಮಣಿಪಾಲ ರಾಣೆಗಳಲ್ಲಿ ದಸ್ತಗಿರಿ ವಾರೆಂಟ್‌ ಇರುವುದು ತಿಳಿದು ಬಂದಿದೆ.

Dailyhunt
Disclaimer: This content has not been generated, created or edited by Dailyhunt. Publisher: News Kannada