ಮೈಸೂರು: ನಿರೀಕ್ಷೆಯಂತೆ ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳ ಕರ್ತವ್ಯದಲ್ಲಿ ಭಾರಿ ಬದಲಾವಣೆ ಆಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳನ್ನ ಎತ್ತಂಗಡಿ ಮಾಡಲಾಗಿದೆ.
ಅಧಿಕಾರಿಗಳ ಕಾರ್ಯನಿರ್ವಣೆಯನ್ನ ಪರಿಷ್ಕರಿಸಿ ಮರುಹಂಚಿಕೆ ಮಾಡಲಾಗಿದೆ.
ಮರುಹಂಚಿಕೆ ಮಾಡಿದ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಕಡತಗಳನ್ನ ಮುಖ್ಯಮಂತ್ರಿಗಳ ಆದೇಶಕ್ಕಾಗಿ ಮಂಡಿಸುವುದು ಹಾಗೂ ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿಗಳು ಪರಿಶೀಲಿಸಲು ಬಯಸಿದಲ್ಲಿ ಕಡತಗಳನ್ನ ಸಲ್ಲಿಸುವಂತೆ ಆದೇಶಿಸಲಾಗಿದೆ.

