Sunday, 09 May, 4.01 pm ನ್ಯೂಸ್ ಕನ್ನಡ

ಹೋಂ
ಮುಂಬೈನಲ್ಲಿ ಏಪ್ರಿಲ್ ಒಂದೇ ತಿಂಗಳಲ್ಲಿ 11ಮಂದಿ ಪೊಲೀಸ್ ಕೊರೋನಗೆ ಬಲಿ

ಮುಂಬೈ : ದೇಶದಲ್ಲಿ ಹೆಚ್ಚುತ್ತಿರುವ ಕೊರೋನವನ್ನು ನಿಯಂತ್ರಿಸಲು ಹಾಗೂ ದೇಶದ ಜನರ ಪ್ರಾಣ ಕಾಪಾಡಲು ವೈದ್ಯರು ಹಾಗೂ ಪೊಲೀಸರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಆದರೆ ಇವರ ಪ್ರಾಣಕ್ಕೆ ಕುತ್ತು ಎದುರಾಗುತ್ತಿದೆ.

ಹೌದು, ಮಹಾನಗರಿ ಮುಂಬೈಯಲ್ಲಿ ಮಾರಕ ಕೊರೋನಾ ದಾಳಿಗೆ ಅನೇಕ ಪೊಲೀಸರು ತತ್ತರಿಸಿದ್ದಾರೆ . ಅಷ್ಟೇ ಅಲ್ಲದೆ ಇದುವರೆಗೆ 110 ಪೊಲೀಸ್ ಸಿಬ್ಬಂದಿ ಕೊರೋನಾದಿಂದಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ .

ಎರಡನೆ ಅಲೆ ಕಾಣಿಸಿಕೊಂಡ ಬಳಿಕ ಏಪ್ರಿಲ್ ಒಂದೇ ತಿಂಗಳಲ್ಲಿ ಒಟ್ಟು 11 ಪೊಲೀಸರು ಕೊರೋನಾದಿಂದ ಮೃತಪಟ್ಟಿದ್ದಾರೆ . ಮಹಾರಾಷ್ಟ್ರದಲ್ಲಿ ಒಟ್ಟು 427 ಪೊಲೀಸ್ ಸಿಬ್ಬಂದಿ ಕೊರೋನಾಕ್ಕೆ ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಒಟ್ಟಾರೆಯಾಗಿ ದೇಶವನ್ನು ರಕ್ಷಿಸಲು ಹಾಗೂ ಹಬ್ಬುತ್ತಿರುವ ಕೊರೋನ ಮಹಾಮಾರಿಯ ಸರಣಿಯನ್ನು ತಪ್ಪಿಸಲು ಪೊಲೀಸರು ತಮ್ಮ ಪ್ರಾಣವನ್ನು ಪಣಕ್ಕೆ ಇಡುತ್ತಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News Kannada
Top