ಮೈಸೂರು: ಎಂಡಿಎ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಹಾಗೂ ಪ್ರಭಾರ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಆರ್.ರಕ್ಷಿತ್ ರನ್ನ ನಗರಾಭಿವೃದ್ದಿ ಸಚಿವರ ಆಪ್ತಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ಕರ್ನಾಟಕ ಸರ್ಕಾರದ ಸಚಿವಾಲಯ ಅಧೀನ ಕಾರ್ಯದರ್ಶಿ ಕೇಶವಪ್ರಸಾದ್ ರವರು ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಮೈಸೂರಿನಲ್ಲಿ ತಹಶೀಲ್ದಾರ್ ಆಗಿ, ಉಪವಿಭಾಗಾಧಿಕಾರಿಗಳಾಗ ಸೇವೆ ಸಲ್ಲಿಸಿದ್ದರು. ಎಂಡಿಎ ಪ್ರಭಾರ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ ಕೆ.ಆರ್.ರಕ್ಷಿತ್ 2000 ಸಾವಿರ ಎಕ್ರೆ ಪ್ರದೇಶದಲ್ಲಿ ನೂತನ ಬಡಾವಣೆ ನಿರ್ಮಿಸುವ ಮಹತ್ತರ ಯೋಜನೆಗೆ ಕೈ ಹಾಕಿದ್ದರು.
ಇದೀಗ ನಗರಾಭಿವೃದ್ದಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ರವರ ಆಪ್ತಕಾರ್ಯದರ್ಶಿಯಾಗಿ ನೇಮಕವಾಗಿದ್ದು ಇವರ ನೂತನ ಬಡಾವಣೆ ನಿರ್ಮಿಸುವ ಯೋಜನೆ ಸಕ್ಸಸ್ ಗೆ ಹಾದಿ ಸುಗಮವಾದಂತಾಗಿದೆ.

