Dailyhunt Logo
  • Light mode
    Follow system
    Dark mode
    • Play Story
    • App Story
ನಿಶ್ಚಿತಾರ್ಥ ಮಾಡಿಕೊಂಡ 'ರಂಗನಾಯಕಿ' ಖ್ಯಾತಿಯ ನಟ ಪವನ್ ರವೀಂದ್ರ

ನಿಶ್ಚಿತಾರ್ಥ ಮಾಡಿಕೊಂಡ 'ರಂಗನಾಯಕಿ' ಖ್ಯಾತಿಯ ನಟ ಪವನ್ ರವೀಂದ್ರ

ನ್ನಡದ ಕಿರುತೆರೆ ನಟ ಪವನ್ ರವೀಂದ್ರ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಫೋಟೊಗಳನ್ನು ನಟ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಟ ಹಂಚಿಕೊಂಡ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಕಮೆಂಟ್ ಮೂಲಕ ಅಭಿನಂದನೆ ತಿಳಿಸುತ್ತಿದ್ದಾರೆ.

ಪವನ್​ ರವೀಂದ್ರ ಅವರು ರಂಗನಾಯಕಿ, ಕಾವ್ಯಾಂಜಲಿ, ನೀ ಇರಲು ಜೊತೆಯಲ್ಲಿ ಕನ್ನಡದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲೂ ಮೋಡಿ ಮಾಡಿದ್ದಾರೆ.

ನಟ ಪವನ್​ ಅವರು ಆರತಿ ಸುಭಾಷ್ ಎಂಬುವವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನು, ಆರತಿ ಸುಭಾಷ್‌ ಅವರು ಸಾಮಾಜಿಕ ಜಾಲತಾಣದ ಪ್ರಭಾವಿ (ಇನ್‌ಫ್ಲುಯೆನ್ಸರ್), ನಟಿ ಹಾಗೂ ರೂಪದರ್ಶಿಯಾಗಿ ಗುರುತಿಸಿಕೊಂಡಿದ್ದಾರೆ.

ಹಲವು ಕಿರುಚಿತ್ರಗಳಲ್ಲಿ ಅಭಿನಯಿಸಿರುವ ಅವರು, 'ಪಾಂಡವರ್ ಇಲ್ಲಂ' ಧಾರಾವಾಹಿಯ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದರು. ಈ ಧಾರಾವಾಹಿಯಲ್ಲಿ ಮಲ್ಲಿಕಾ ಪಾತ್ರದಲ್ಲಿ ನಟಿಸುತ್ತಿದ್ದ ಅವರ ಅಭಿನಯಕ್ಕೆ ತಮಿಳು ಕಿರುತೆರೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: News Kannada