Dailyhunt Logo
  • Light mode
    Follow system
    Dark mode
    • Play Story
    • App Story
ಒಂದೇ ಒಂದು ತಪ್ಪು ಹೆಜ್ಜೆ ಇಟ್ಟರೂ ಇರಾನ್‌ ಸರ್ವನಾಶ: ಟ್ರಂಪ್

ಒಂದೇ ಒಂದು ತಪ್ಪು ಹೆಜ್ಜೆ ಇಟ್ಟರೂ ಇರಾನ್‌ ಸರ್ವನಾಶ: ಟ್ರಂಪ್

ವಾಷಿಂಗ್ಟನ್‌: ಒಂದೇ ಒಂದು ತಪ್ಪು ಹೆಜ್ಜೆ ಇಟ್ಟರೂ ಇರಾನ್‌ ಸರ್ವನಾಶವಾಗಲಿದೆ ಎಂದು ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅಂತ್ಯಸಂಸ್ಕಾರದ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

'ಅಮೆರಿಕದ ವಿರುದ್ಧ ಇರಾನ್ ಒಂದೇ ಒಂದು ತಪ್ಪು ಹೆಜ್ಜೆ ಇಟ್ಟರೂ ಅಥವಾ ದಾಳಿಗೆ ಮುಂದಾದರೆ, ಇರಾನ್‌ನ ಇಡೀ ನಾಯಕತ್ವವನ್ನು ಸಂಪೂರ್ಣವಾಗಿ ನಾಶ ಮಾಡಲು ನಮಗೆ ಕೇವಲ ಒಂದು ದಾಳಿ ಸಾಕಾಗುತ್ತದೆ' ಎಂದು ಟ್ರಂಪ್ ಹೇಳಿದ್ದಾರೆ.

'ಅವರೆಲ್ಲರೂ ಅಲ್ಲಿದ್ದಾರೆ. ಒಂದೇ ಒಂದು ದಾಳಿಯಲ್ಲಿ ಎಲ್ಲರನ್ನು ನಾಶ ಮಾಡಬಹದು. ಆದರೆ ನಾವು ಹಾಗೇ ಮಾಡುವುದಿಲ್ಲ. ಏಕೆಂದರೆ ಅಲ್ಲಿ ಸಂಧಾನ ನಡೆಸಲು ಯಾರೂ ಇರುವುದಿಲ್ಲ. ಇರಾನ್ ಒಪ್ಪಂದಕ್ಕಾಗಿ ಬೇಡಿಕೊಳ್ಳುತ್ತಿದೆ' ಎಂದು ಹೇಳಿದ್ದಾರೆ.

'ಇರಾನ್‌ಗೆ ನಾವು ತಕ್ಕ ಪಾಠ ಕಲಿಸಿದ್ದೇವೆ. ಅವರು ಸಂಧಾನಕ್ಕಾಗಿ ಬೇಡಿಕೊಳ್ಳುತ್ತಿದ್ದಾರೆ. ನಾವು ಒಳ್ಳೆಯವರಾಗಿದ್ದರಿಂದ ಅವರ ನಾಯಕನ ಅಂತ್ಯ ಸಂಸ್ಕಾರಕ್ಕಾಗಿ ಸಂಧಾನ ಮಾತುಕತೆಗೆ ಒಂದು ವಾರದ ವಿರಾಮ ನೀಡಿದ್ದೇವೆ' ಎಂದು ಹೇಳಿದ್ದಾರೆ.

'ಅಮೆರಿಕ ಸಹಿಷ್ಠುತೆ ಹೊಂದಿರುವ ದೇಶವಾಗಿದ್ದರಿಂದ ವಾರದ ವಿರಾಮವನ್ನು ನೀಡಿದ್ದೇವೆ. ಆದರೆ ಅದನ್ನು ನಮ್ಮ ದೌರ್ಬಲ್ಯ ಎಂದು ಭಾವಿಸಬಾರದು. ಇರಾನ್ ಈಗಲೂ ಅಮೆರಿಕದ ವಿರುದ್ಧ ಪ್ರಚೋದನಾತ್ಮಕ ಕ್ರಮಗಳಿಗೆ ಮುಂದಾದರೆ ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ' ಎಂದು ಎಚ್ಚರಿಸಿದ್ದಾರೆ.

ಖಮೇನಿ ಅಂತ್ಯ ಸಂಸ್ಕಾರದ ವಿಧಿವಿಧಾನಗಳ ಸಂದರ್ಭದಲ್ಲಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಸೇರಿದಂತೆ ಸಾವಿರಾರು ಮಂದಿ ಅಳುತ್ತಿರುವುದಕ್ಕೆ ಟ್ರಂಪ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಜನರು ಖಮೇನಿ ಅವರನ್ನು ದ್ವೇಷಿಸುತ್ತಾರೆ ಎಂದು ಭಾವಿಸಿದ್ದೆ. ಬಹುಶಃ ಇದು ನಕಲಿ ಕಣ್ಣೀರು ಆಗಿರಬಹುದು' ಎಂದಿದ್ದಾರೆ.

ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮಾತನಾಡಿದ ಟ್ರಂಪ್, ಇರಾನ್ ಹಾಗೂ ವೆನಿಜುವೆಲಾದ ಮೇಲೆ ನಡೆಸಿದ ಅಮೆರಿಕದ ಸೇನಾಬಲದ ಕುರಿತು ಕೊಂಡಾಡಿದ್ದಾರೆ. ವೆನಿಜುವೆಲಾದ ಮೇಲಿನ ದಾಳಿಯನ್ನು ಕುರಿತು ಪ್ರತಿಕ್ರಿಯಿಸಿದ ಅವರು, 'ನಾವು ಕೇವಲ ಒಂದೇ ದಿನದಲ್ಲಿ ವೆನಿಜುವೆಲಾ ದೇಶವನ್ನು ಸೋಲಿಸಿದ್ದೇವೆ. ಜಗತ್ತಿನ ಇತಿಹಾಸದಲ್ಲೇ ಅತ್ಯಂತ ಬಲಿಷ್ಠ ಸೇನೆಯನ್ನು ಅಮೆರಿಕ ಹೊಂದಿದೆ' ಎಂದು ಹೊಗಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: News Kannada